ಮಳೆಗಾಲದಲ್ಲಿ ಹರಡುವ ಕಣ್ಣಿನ ಸಮಸ್ಯೆಗೆ ಮನೆಮದ್ದು ಇಲ್ಲಿದೆ

"ಗುಲಾಬಿ ಕಣ್ಣು" ಎಂದು ಕರೆಯಲ್ಪಡುವ ಕಂಜಂಕ್ಟಿವಿಟಿಸ್ ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಆದ್ದರಿಂದ ಇಂತಹ ಕಣ್ಣಿನ ಸಮಸ್ಯೆಗೆ​ ಮನೆಯಲ್ಲಿಯೇ ಪ್ರಥಮ ಚಿಕಿತ್ಸೆಯನ್ನು ಕಂಡುಕೊಳ್ಳಿ.

ಗುಲಾಬಿ ಕಣ್ಣುಗಳು, ಕಣ್ಣು ತುರಿಕೆ ಸಮಸ್ಯೆಗೆ ಆರೋಗ್ಯ ತಜ್ಞರಾದ ಶ್ರೇಯಾ ರುಸ್ತಗಿ ಕೆಲವು ಮನೆ ಮದ್ದು ಹಂಚಿಕೊಂಡಿದ್ದಾರೆ.

ತ್ರಿಫಲ: ಅರ್ಧಲೋಟ ನೀರಿಗೆ ತ್ರಿಫಲ ಪುಡಿಯನ್ನು ಹಾಕಿ ರಾತ್ರಿಯಿಡೀ ನೆನೆಸಿಡಿ. ಬೆಳಗ್ಗೆ  ಆ ನೀರಿನಿಂದ ಮುಖ ತೊಳೆಯಿರಿ.

ಹತ್ತಿಯನ್ನು ಹಾಲಿನಲ್ಲಿ ಅದ್ದಿ ನಿಮ್ಮ ಕಣ್ಣುಗಳ ಸುತ್ತಲೂ ಹಚ್ಚಿ, ಕೆಲಹೊತ್ತಿನ ಹಾಗೆಯೇ ಬಿಡಿ.

ನೀರಿನಲ್ಲಿ ಅರಶಿನವನ್ನು ಬೆರೆಸಿ, ಆ ನೀರನ್ನು ಕಣ್ಣು ತುರಿಕೆ ಅಥವಾ ಕೆಂಪಾಗಿರುವ ಭಾಗಕ್ಕೆ ಹಚ್ಚಿ.

ಬೇವಿನ ಪುಡಿಯನ್ನು ಸ್ವಲ್ಪ ಹಾಲು ಅಥವಾ ನೀರಿನಲ್ಲಿ ಬೆರೆಸಿ ಪೇಸ್ಟ್​​ ತಯಾರಿಸಿ ಕಣ್ಣಿನ ಸುತ್ತಲೂ ಹಚ್ಚಿ.

ಒಂದು ಹಿಡಿ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಕುದಿಸಿ, ಸ್ವಲ್ಪ ತಣ್ಣಗಾದ ನಂತರ ಆ ನೀರಿನಿಂದಲೇ ಕಣ್ಣಿನ ಭಾಗ ತೊಳೆಯಿರಿ.