ಚೆಕ್ ಬರೆಯುವಾಗ ಈ ತಪ್ಪುಗಳನ್ನು ಮಾಡದಿರಿ

ಚೆಕ್ ಬರೆಯುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ ಅನಗತ್ಯ ಕಾನೂನು ಸಿಕ್ಕುಗಳು ಬರಬಹುದು.

1. ಚೆಕ್ ಮೇಲೆ ಪದಗಳಲ್ಲಿ ಹಣವನ್ನು ನಮೂದಿಸಿದ ಬಳಿಕ ಅಂತ್ಯದಲ್ಲಿ Only ಎಂದು ತಪ್ಪದೇ ಬರೆಯಿರಿ

2. ಬ್ಲ್ಯಾಂಕ್ ಚೆಕ್​ಗೆ ಎಂದಿಗೂ ಸಹಿಹಾಕದಿರಿ. ಯಾರಿಗೆ ಚೆಕ್ ಕೊಡುತ್ತೀರೋ ಅವರ ಹೆಸರು, ಹಣ, ದಿನಾಂಕ ಹಾಕಿದ ಬಳಿಕ ಸಹಿ ಮಾಡಿರಿ

3. ಚೆಕ್​ಗೆ ಸಹಿ ಬಹಳ ಮುಖ್ಯ. ಇದು ನಿಖರವಾಗಿರಬೇಕು. ಸಣ್ಣ ತಪ್ಪಾದರೂ ಚೆಕ್ ತಿರಸ್ಕೃತವಾಗಬಹುದು.

4. ಚೆಕ್​ನಲ್ಲಿ ಸರಿಯಾದ ದಿನಾಂಕ ಹಾಕುವುದನ್ನು ಮರೆಯದಿರಿ. ಚೆಕ್ ಬರೆದ ದಿನದ ದಿನಾಂಕವನ್ನೇ ಬರೆಯುವುದು ಸರಿ. ಪೋಸ್ಟ್ ಡೇಟ್ ಚೆಕ್ ಸಾಧ್ಯವಾದಷ್ಟೂ ತಪ್ಪಿಸಿ.

5. ಚೆಕ್ ಬರೆಯುವಾಗ ಬಾಲ್​ಪಾಯಿಂಟ್ ಪೆನ್ ಅಥವಾ ಪರ್ಮನೆಂಟ್ ಇಂಕ್ ಪೆನ್ ಉಪಯೋಗಿಸಿ. ಇದರಿಂದ ಅಕ್ಷರ ಅಳಿಸಿಹೋಗಿ ಚೆಕ್ ದುರ್ಬಳಕೆಯಾಗುವ ಸಾದ್ಯತೆ ತಪ್ಪಿಸಬಹುದು.

6. ಚೆಕ್ ಬರೆಯುವ ಮುನ್ನ ಆ ಮೊತ್ತದ ಹಣ ನಿಮ್ಮ ಖಾತೆಯಲ್ಲಿದೆಯಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇಲ್ಲವಾದರೆ ಚೆಕ್ ಬೌನ್ಸ್ ಆಗುತ್ತದೆ.

7. ಚೆಕ್ ನೀಡುವ ಮುನ್ನ ಅದರ ನಂಬರ್ ಅನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಚೆಕ್ ವಿಚಾರದಲ್ಲಿ ವ್ಯಾಜ್ಯ ಉಂಟಾದರೆ ಅದು ಉಪಯೋಗಕ್ಕೆ ಬರಬಹುದು.