Pic Credit: Google
15 September 2023
ಟೈಮ್ ಮ್ಯಾಗಝಿನ್ ಮತ್ತು ಸ್ಟಾಟಿಸ್ಟಾ ಸಂಸ್ಥೆಗಳು ಸೇರಿ ವಿಶ್ವದ 750 ಅತ್ಯುತ್ತಮ ಕಂಪನಿಗಳನ್ನು ಗುರುತಿಸಿವೆ. ಇದರಲ್ಲಿ 8 ಭಾರತೀಯ ಕಂಪನಿಗಳಿವೆ.
Pic Credit: Google
ಉದ್ಯೋಗಿಗಳ ತೃಪ್ತಿ, ಆದಾಯ ವೃದ್ಧಿ, ಸುಸ್ಥಿರತೆ (Sustainability) ಈ ಮೂರು ಅಂಶಗಳನ್ನು ಮಾನದಂಡ ವಾಗಿಟ್ಟುಕೊಂಡು ಅತ್ಯುತ್ತಮ ಕಂಪನಿಗಳನ್ನು ಪಟ್ಟಿ ಮಾಡಲಾಗಿದೆ.
Pic Credit: Google
ಪಟ್ಟಿಯಲ್ಲಿ ಅಮೆರಿಕನ್ ಸಂಸ್ಥೆಗಳು ಹೆಚ್ಚು. ಮೈಕ್ರೋಸಾಫ್ಟ್, ಆ್ಯಪಲ್, ಆಲ್ಫಬೆಟ್, ಮೆಟಾ ಮೊದಲ 4 ಸ್ಥಾನದಲ್ಲಿವೆ. ಭಾರತೀಯ ಕಂಪನಿಗಳ ಬಗ್ಗೆ ಮುಂದಿನ ಸ್ಲೈಡ್ಗಳಲ್ಲಿದೆ ಮಾಹಿತಿ.
Pic Credit: Google
ಟೈಮ್ ಮ್ಯಾಗಝಿನ್ನ ಅತ್ಯುತ್ತಮ 750 ಕಂಪನಿಗಳ ಪಟ್ಟಿಯಲ್ಲಿ ಐಟಿಸಿ 672ನೇ ಸ್ಥಾನ ಪಡೆದಿದೆ. ಇದರ ಒಟ್ಟಾರೆ ಅಂಕ 77.23.
Pic Credit: Google
ಮುಂಬೈನಲ್ಲಿ ಮುಖ್ಯ ಕಚೇರಿ ಹೊಂದಿರುವ ಡಬ್ಲ್ಯುಎನ್ಎಸ್ ಗ್ಲೋಬಲ್ ಪ್ರೋಸಸ್ ಮ್ಯಾನೇಜ್ಮೆಂಟ್ ಕಂಪನಿ ಈ ಪಟ್ಟಿಯಲ್ಲಿ 596ನೇ ಸ್ಥಾನದಲ್ಲಿದೆ. ಒಟ್ಟಾರೆ ಅಂಕ 78.91.
Pic Credit: Google
ಎಚ್ಡಿಎಫ್ಸಿ ಬ್ಯಾಂಕ್ ವಿಶ್ವದ ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ 418ನೇ ಸ್ಥಾನ ಪಡೆದಿದೆ. ಇದರ ಒಟ್ಟಾರೆ ಅಂಕ 81.99 ಇದೆ.
Pic Credit: Google
ಎಚ್ಸಿಎಲ್ ಟೆಕ್ನಾಲಜೀಸ್ ಸಂಸ್ಥೆ ಟೈಮ್ ಮ್ಯಾಗಝಿನ್ ಬೆಸ್ಟ್ ಕಂಪನಿಗಳ ಪಟ್ಟಿಯಲ್ಲಿ 262ನೇ ಸ್ಥಾನ ಪಡೆದಿದೆ. ಇದರ ಸ್ಕೋರ್ 84.22.
Pic Credit: Google
ರಿಲಾಯನ್ಸ್ ಇಂಡಸ್ಟ್ರೀಸ್ 248ನೇ ಅತ್ಯುತ್ತಮ ಕಂಪನಿ ಎಂಬ ಗೌರವಕ್ಕೆ ಬಾಜನವಾಗಿದೆ. ಇದರ ಒಟ್ಟಾರೆ ಸ್ಕೋರ್ 84.39 ಇದೆ.
Pic Credit: Google
ಟೈಮ್ ಮ್ಯಾಗಝಿನ್ ರೂಪಿಸಿದ ವಿಶ್ವದ ಅತ್ಯುತ್ತಮ 750 ಕಂಪನಿಗಳ ಪಟ್ಟಿಯಲ್ಲಿ ಮಹೀಂದ್ರ ಗ್ರೂಪ್ 85.13 ಅಂಕಗಳೊಂದಿಗೆ 210ನೇ ಸ್ಥಾನ ಪಡೆದಿದೆ.
Pic Credit: Google
ಬೆಂಗಳೂರಿನಲ್ಲಿ ಮುಖ್ಯಕಚೇರಿ ಹೊಂದಿರುವ ಐಟಿ ಸಂಸ್ಥೆ ವಿಪ್ರೋ ಸಂಸ್ಥೆ ಈ ಪಟ್ಟಿಯಲ್ಲಿ 174ನೇ ಸ್ಥಾನ ಪಡೆದಿದೆ. ಇದರ ಸ್ಕೋರ್ 85.67 ಇದೆ.
Pic Credit: Google
ಬೆಂಗಳೂರು ಮೂಲದ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆ ವಿಶ್ವದ ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ 64ನೇ ಸ್ಥಾನ ಪಡೆದಿದೆ. ಇದರ ಸ್ಕೋರ್ 88.38 ಇದೆ.
Pic Credit: Google