ಮಳೆಗಾಲದಲ್ಲಿ ನಿಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿಟ್ಟುಕೊಳ್ಳಲು ಇಲ್ಲಿದೆ ಕೆಲವು ಸಲಹೆಗಳು

ನಿಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ 

ನಿಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ಸ್ವಚ್ಛಗೊಳಿಸುವಾಗ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ ಧರಿಸಿ. ಇಲ್ಲದಿದ್ದರೇ ಧೂಳಿನಿಂದ ಅಲರ್ಜಿ ಉಂಟಾಗಿ ಶ್ವಾಸಕೋಶಕ್ಕೆ ತೊಂದರೆಯಾಗಬಹುದು

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ 

ಹಣ್ಣುಗಳು ಮತ್ತು ಡ್ರಾಯ್ ಫ್ರೂಟ್ಸ್ ಗಳು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಲು ಸಹಾಯಕವಾಗುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೇ, ಕಾಯಿಲೆಗಳು ಬರುತ್ತವೆ.

ಉಗಿ ತೆಗೆದುಕೊಳ್ಳುವುದು

ಪ್ರತಿದಿನ ಉಗಿ ತೆಗೆದುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಿ. ಇದು ದೇಹದಲ್ಲಿನ ವಾಯುಮಾರ್ಗವನ್ನು ಸ್ವಚ್ಛಗೊಳಿಸುತ್ತದೆ ಮತ್ತು ಆರೋಗ್ಯಕರವಾಗಿರಲು ಸಹಾಯಕ

ಶುಷ್ಕ ಮತ್ತು ಬೆಚ್ಚಗಿರಿ

ಮಳೆಗಾಲದಲ್ಲಿ ಹೆಚ್ಚು ಮಳೆ ನೀರಿನಲ್ಲಿ ಮಳೆಯಲ್ಲಿ ನೆನೆಯಬೇಡಿ. ಹೆಚ್ಚು ನೆನೆದರೆ ನ್ಯುಮೋನಿಯಾ ರೋಗ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಮ್ಮ ಪಾದ ಅಂಗೈಗಳನ್ನು ಹೆಚ್ಚು ಒಣ ಮತ್ತು ಬಿಸಿಯಾಗಿ ಇರುವಂತೆ ನೋಡಿಕೊಳ್ಳಿ 

ವ್ಯಾಕ್ಸಿನೇಶನ್

ರೋಗಿಗಳು ಮತ್ತು ಹಿರಿಯರು ಶೀತಜ್ವರ ಮತ್ತು ನ್ಯುಮೋನಿಯಾ ವ್ಯಾಕ್ಸಿನೇಶನ್ ನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಿ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಿ

ಅಸ್ತಮಾ, ಕ್ಷಯ ಅಥವಾ ಶ್ವಾಸನಾಳಗಳ ಒಳಪೊರೆಯ ಉರಿಯೂತ ಇದ್ದರೆ ಕೂಡಲೆ ವೈದ್ಯರನ್ನು ಸಂಪರ್ಕ ಮಾಡಿ ಪರೀಕ್ಷಿಸಿಕೊಳ್ಳಿ