ಏಕದಿನ ವಿಶ್ವಕಪ್ ನಲ್ಲಿ ಒಂದೇ ಓವರ್ ನಲ್ಲಿ ಅತ್ಯಧಿಕ ರನ್ ಚಚ್ಚಿದ ಬ್ಯಾಟರ್ ಗಳ ಪಟ್ಟಿ ಇಲ್ಲಿದೆ.

10. ಬ್ರಿಯಾನ್ ಲಾರಾ: 2003 ರ ವಿಶ್ವಕಪ್‌ನಲ್ಲಿ ಕೆನಡಾ ವಿರುದ್ಧ ಒಂದೇ ಓವರ್‌ನಲ್ಲಿ 26 ರನ್ ಬಾರಿಸಿದ್ದರು.

9. ಹಾಶಿಮ್ ಆಮ್ಲಾ: 2015 ರ ವಿಶ್ವಕಪ್​ನಲ್ಲಿ ಐರ್ಲೆಂಡ್ ವಿರುದ್ಧ ಒಂದೇ ಓವರ್‌ನಲ್ಲಿ 26 ರನ್ ಬಾರಿಸಿದ್ದರು.

8. ರಾಸ್ ಟೇಲರ್: 2011ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಒಂದೇ ಓವರ್‌ನಲ್ಲಿ 28 ರನ್ ಸಿಡಿಸಿದ್ದರು.

7. ರಾಸ್ ಟೇಲರ್: 2011ರ ವಿಶ್ವಕಪ್‌ನಲ್ಲಿ ಕೆನಡಾ ವಿರುದ್ಧ ಒಂದೇ ಓವರ್‌ನಲ್ಲಿ 28 ರನ್ ಸಿಡಿಸಿದ್ದರು.

6. ಡ್ಯಾರೆನ್ ಲೆಹ್ಮನ್: ಆಸ್ಟ್ರೇಲಿಯದ ಈ ಬ್ಯಾಟರ್ 2003ರ ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧ ಒಂದೇ ಓವರ್‌ನಲ್ಲಿ 28 ರನ್‌ ಸಿಡಿಸಿದ್ದರು.

5. ಜೇಮ್ಸ್ ಫ್ರಾಂಕ್ಲಿನ್: 2011 ರ ವಿಶ್ವಕಪ್‌ನಲ್ಲಿ ವಾಂಖೆಡೆಯಲ್ಲಿ ಕೆನಡಾ ವಿರುದ್ಧ ಒಂದೇ ಓವರ್‌ನಲ್ಲಿ 28 ರನ್ ಸಿಡಿಸಿ ದಾಖಲೆ ಪುಸ್ತಕ ಸೇರಿಸಿದ್ದರು.

4. ಡೇವಿಡ್ ಮಿಲ್ಲರ್: 2015 ರ ವಿಶ್ವಕಪ್​ನಲ್ಲಿ ಜಿಂಬಾಬ್ವೆ ವಿರುದ್ಧ ಒಂದೇ ಓವರ್‌ನಲ್ಲಿ 30 ರನ್ ಬಾರಿಸಿದ್ದರು.

3. ಎಬಿ ಡಿವಿಲಿಯರ್ಸ್: 2015 ರ ವಿಶ್ವಕಪ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಒಂದೇ ಓವರ್‌ನಲ್ಲಿ 30 ರನ್ ಬಾರಿಸಿದ್ದರು.

2. ಎಬಿ ಡಿವಿಲಿಯರ್ಸ್: ಇದೇ ಪಂದ್ಯದಲ್ಲಿ  ಒಂದೇ ಓವರ್‌ನಲ್ಲಿ 32 ರನ್ ಸಿಡಿಸಿ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ್ದರು.

1. ಹರ್ಷಲ್ ಗಿಬ್ಸ್: ಒಡಿಐ ವಿಶ್ವಕಪ್ ಪಂದ್ಯವೊಂದರಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಏಕೈಕ ಆಟಗಾರ ಹರ್ಷಲ್ ಗಿಬ್ಸ್. 2007ರ ವಿಶ್ವಕಪ್‌ನಲ್ಲಿ ಒಂದೇ ಓವರ್‌ನಲ್ಲಿ 36 ರನ್ ಸಿಡಿಸಿದ್ದರು.