ಟ್ರಾಫಿಕ್ ನಲ್ಲಿ ಸಿಕ್ಕಿಕೊಳ್ಳದಿರಲು ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರಿಗರಿಗೆ ಟ್ರಾಫಿಕ್ ನಲ್ಲಿ ಸಮಯ ಕಳೆಯುವುದು ಜೀವನದ ಒಂದು ಭಾಗವಾಗಿ ಬಿಟ್ಟಿದೆ.
ಆದರೆ ನೀವು ಈ ಟಿಪ್ಸ್ಗಳನ್ನು ಪಾಲಿಸುವುದರಿಂದ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಮಸ್ಯೆಯಿಂದ ಹೊರಬರಬಹುದು.
ಪ್ರಯಾಣ ಬೆಳೆಸುವ ಮೊದಲು ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಟ್ರಾಫಿಕ್ ವರದಿಗಳನ್ನು ಪರಿಶೀಲಿಸಿ.
ಟ್ರಾಫಿಕ್ ಬಗ್ಗೆ ಹೆಚ್ಚಿನ ಅಪ್ಡೇಟ್ ಪಡೆದುಕೊಳ್ಳಲು ಸ್ಥಳೀಯ ಟ್ರಾಫಿಕ್ ಪೋಲಿಸ್ ಅಧಿಕೃತ ಟ್ವಿಟರ್ ಖಾತೆಯನ್ನು ಫಾಲೋ ಮಾಡಿ.
ಕಡಿಮೆ ವಾಹನ ದಟ್ಟನೆ ಇರುವ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಿ.
ನಿಮ್ಮ ಸ್ವಂತ ವಾಹನ ಬಳಕೆಗಿಂತ, ಕೆಲವು ಸಮಯಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸಿ.
ನಿಮ್ಮ ಫೋನ್ನಲ್ಲಿ ಟ್ರಾಫಿಕ್ಗೆ ಸಂಬಂಧಿಸಿದ ಅಪ್ಲೀಕೇಶನ್ಗಳನ್ನು ಡೌನ್ಲೋಡ್ ಮಾಡಿ.
ನಿಮ್ಮ ಕಛೇರಿ ಅಥವಾ ತಲುಪುವ ಸ್ಥಳ ಹೆಚ್ಚು ದೂರ ಇರದಿದ್ದರೆ ನಡಿಗೆ ಅಭ್ಯಾಸ ಬೆಳೆಸಿ, ಇದು ಆರೋಗ್ಯಕ್ಕೂ ಒಳ್ಳೆಯದು.