ಭಾರತದ ಅತ್ಯಂತ ಸುಸ್ಥಿರ ಪ್ರವಾಸೋದ್ಯಮ ತಾಣಗಳು ಇಲ್ಲಿವೆ

ವಿಶ್ವ ಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯ ಪ್ರಕಾರ  ಪರಿಸರ, ಪರಂಪರೆ, ಸಂಸ್ಕೃತಿ ಮತ್ತು ಆರ್ಥಿಕತೆ ಸುಸ್ಥಿರ ಪ್ರವಾಸೋದ್ಯಮದ ಭಾಗವಾಗಿರುತ್ತದೆ. 

ಸಿಕ್ಕಿಂ: ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಭಾರತದ ಮೊದಲ ಸಂಪೂರ್ಣ ಸಾವಯವ ರಾಜ್ಯವಾಗಿದೆ. ಜೊತೆಗೆ ಪ್ರವಾಸೋದ್ಯಮಕ್ಕೆ ಉತ್ತಮ ತಾಣವೂ ಹೌದು. 

ಮಾವ್ಲಿನ್ನಾಂಗ್​​, ಮೇಘಾಲಯ: ಇದು ಏಷ್ಯಾದ ಸ್ವಚ್ಛ ಗ್ರಾಮಗಳಲ್ಲಿ ಒಂದಾಗಿದ್ದು, ನೈಸರ್ಗಿಕ ಸೌಂದರ್ಯದಿಂದಲೇ ಜನರನ್ನು ತನ್ನತ್ತ ಸೆಳೆಯುತ್ತಿದೆ.

ಥೆನ್ಮಲ, ಕೇರಳ: ನೀವು ಪರಿಸರ ಪ್ರೇಮಿಗಳಾಗಿದ್ದರೇ ಖಂಡಿತಾ ಈ ತಾಣ ನಿಮಗೆ ಇಷ್ಟವಾಗುತ್ತದೆ. ಇಲ್ಲಿ ತಾಣದಲ್ಲಿ ಕಲ್ಲಡಾ ನದಿ ಹಾಗೂ ಥೆನ್ಮಲ ಅಣೆಕಟ್ಟನ್ನು ಕಣ್ತುಂಬಿಸಿಕೊಳ್ಳಬಹುದು.

ಖೋನೋಮಾ, ನಾಗಾಲ್ಯಾಂಡ್: ಇದು ಒಂದು ಕಾಲದಲ್ಲಿ ಬೇಟೆಗಾರರ ಗ್ರಾಮವಾಗಿತ್ತು. ಜೊತೆಗೆ ಭಾರತದ ಮೊದಲ ಗ್ರಾಮವೆಂದೇ ಹೆಸರುವಾಸಿಯಾಗಿದೆ.  

ಮಜುಲಿ, ಅಸ್ಸಾಂ: ಸುಸ್ಥಿರ ಪ್ರವಾಸೋದ್ಯಮ ಒಂದು ಉತ್ತಮ ನಿದರ್ಶನ ಇದಾಗಿದ್ದು, ಇಲ್ಲಿ ನೀವು ಯಾವುದೇ ಮಾಲಿನ್ಯ ಮುಕ್ತವಾಗಿರುವ ದ್ವೀಪ ಪ್ರದೇಶವನ್ನು ಕಾಣಬಹುದು.