ರಜಾದಿನಗಳಲ್ಲಿ ನೀವು ಭೇಟಿ ನೀಡಲೇಬೇಕಾದ ತಾಣಗಳು ಇಲ್ಲಿವೆ

ಮೈಸೂರು ಅರಮನೆ: ಇಲ್ಲಿನ ಪುರಾತನ ವಾಸ್ತುಶೈಲಿಯ ಅರಮನೆ, ವಸ್ತು ಸಂಗ್ರಹಾಲಯ, ಪುರಾತನ ದೇವಾಲಗಳನ್ನು ಕಣ್ತುಂಬಿಸಿಕೊಳ್ಳಬಹುದು.

ಉಡುಪಿ: ಕರ್ನಾಟಕದ ಕರಾವಳಿ ಭಾಗದ ಈ ತಾಣ ಕಡಲತೀರಗಳು ಹಾಗೂ ಪುರಾತನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ.

ಹಂಪಿ: ಪುರಾತನ ವಾಸ್ತುಶೈಲಿ ಹಾಗೂ ದೇವಾಲಯಗಳಿಂದ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ತಾಣವಾಗಿದೆ

ಗೋಕರ್ಣ: ಕಡಲತೀರಗಳು, ಪುರತಾನ ದೇವಾಲಗಳಿಂದಲೇ ಈ ತಾಣ ಜನಪ್ರಿಯತೆಯನ್ನು ಪಡೆದುಕೊಂಡಿದೆ. 

ಮಡಿಕೇರಿ: ಕಾಫಿತೋಟಗಳಿಂದ ಆವೃತವಾಗಿರುವ ಸುಂದರ ಹಚ್ಚಹಸುರಿನ ಗಿರಿಧಾಮ ಇದಾಗಿದೆ. 

ಚಿತ್ರದುರ್ಗದ ಕೋಟೆ: ಐತಿಹಾಸಿಕ ಕೋಟೆ ಹಾಗೂ ಸ್ಮಾರಕ ಹಾಗೂ ಕಲ್ಲಿನ ಕೋಟೆಗಳಿಂದಲೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. 

ಬೇಲೂರು ಹಳೆಬೀಡು: ಹೊಯ್ಸಳ ವಾಸ್ತು ಶಿಲ್ಪಕ್ಕೆ ಹೆಸರುವಾಸಿಯಾಗಿರುವ ಐತಿಹಾಸಿಕ ತಾಣ. 

ಬಾದಾಮಿ: ಪ್ರಾಚೀನ ಕಲ್ಲಿನ ದೇವಾಲಯಗಳು ಹಾಗೂ ಗುಹೆಗಳಿಂದ ಹೆಸರುವಾಸಿಯಾದ ಉತ್ತಮ ಐತಿಹಾಸಿಕ ತಾಣ

ಜೋಗ ಜಲಪಾತ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಿಶ್ವ ವಿಖ್ಯಾತ ಜಲಪಾತ ಇದಾಗಿದೆ.