ದೊಡ್ಡ ಆಫರ್ ಗಿಟ್ಟಿಸಿಕೊಂಡ ತ್ರಿಶಾ ಕೃಷ್ಣನ್

13-Sep 2023

Pic credit - Instagram

ತ್ರಿಶಾ ಕೃಷ್ಣನ್ ಅವರು ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರಿಗೆ ಈಗ ದೊಡ್ಡ ಸಿನಿಮಾ ಆಫರ್ ಒಂದು ಸಿಕ್ಕಿದೆ.

ತ್ರಿಶಾ ಕೃಷ್ಣನ್

ಕಮಲ್ ಹಾಸನ್ ಅವರ ಮುಂದಿನ ಚಿತ್ರಕ್ಕೆ ತ್ರಿಶಾ ನಾಯಕಿ ಎನ್ನಲಾಗಿದೆ. ಇದು ಕಮಲ್ ನಟನೆಯ 234ನೇ ಸಿನಿಮಾ.

ಕಮಲ್ ಜೊತೆ ನಟನೆ

ಕಮಲ್ ಹಾಸನ್ ಅವರ 234ನೇ ಚಿತ್ರಕ್ಕೆ ಮಣಿರತ್ನಂ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ತ್ರಿಶಾಗೆ ನಟಿಸೋ ಅವಕಾಶ ಸಿಕ್ಕಿದೆ.

ಮಣಿರತ್ನಂ ನಿರ್ದೇಶನ

ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಭಾಗ 1 ಹಾಗೂ 2ರಲ್ಲಿ ತ್ರಿಶಾ ನಟಿಸಿದ್ದರು. ಈಗ ಅವರು ಮತ್ತೊಮ್ಮೆ ಮಣಿರತ್ನಂ ಜೊತೆ ಕೆಲಸ ಮಾಡುತ್ತಿದ್ದಾರೆ.

ಪೊನ್ನಿಯಿನ್ ಸೆಲ್ವನ್

ತ್ರಿಶಾ ಅವರು ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ದಳಪತಿ ವಿಜಯ್ ನಟನೆಯ ‘ಲಿಯೋ’ಗೆ ಅವರೇ ನಾಯಕಿ.

ಹಲವು ಸಿನಿಮಾಗಳಲ್ಲಿ ಬ್ಯುಸಿ

ಪುನೀತ್ ರಾಜ್​ಕುಮಾರ್ ನಟನೆಯ ‘ಪವರ್’ ಸಿನಿಮಾದಲ್ಲಿ ತ್ರಿಶಾ ನಟಿಸಿದ್ದರು. ಪುನೀತ್ ಹಾಗೂ ತ್ರಿಶಾ ಕೆಮಿಸ್ಟ್ರಿ ಕೆಲಸ ಮಾಡಿತ್ತು.

ಕನ್ನಡದಲ್ಲೂ ನಟನೆ

ಚಿತ್ರರಂಗದಲ್ಲಿ ತ್ರಿಶಾ ಅವರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅದ್ಭುತ ನಟನೆಯ ಮೂಲಕ ಅವರು ಜನಮನ ಗೆದ್ದಿದ್ದಾರೆ.

ಹಲವು ವರ್ಷಗಳ ಸೇವೆ

‘ಜವಾನ್’ ಸಿನಿಮಾ ಪ್ರತಿ ದಿನ ಗಳಿಸಿದ ಕಲೆಕ್ಷನ್ ವಿವರ