ಬೆಳಗಿನ ಉಪಹಾರಕ್ಕಾಗಿ ಈ ಸ್ಪೆಷಲ್ ಉಪ್ಪಿಟ್ಟು ಟ್ರೈ ಮಾಡಿ

ಪೌಷ್ಟಿಕ ತಜ್ಞರಾದ ರಾಶಿ ಚೌಧರಿ ಈ ಆರೋಗ್ಯಕರ ಸ್ಪೆಷಲ್ ಉಪ್ಪಿಟ್ಟಿನ ಪಾಕ ವಿಧಾನವನ್ನು ಹಂಚಿಕೊಂಡಿದ್ದಾರೆ.

ಮೊದಲಿಗೆ ಬಾಣಲೆಗೆ ಸ್ಪಲ್ಪ ತುಪ್ಪ ಹಾಕಿ, ಇದಾದ ಬಳಿಕ ಜೀರಿಗೆ, ಸಾಸಿವೆ, ಹಸಿ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಸೇರಿಸಿ.

ಈಗ ಈರುಳ್ಳಿ ಮತ್ತು ಉಪ್ಪು ಸೇರಿಸಿ ಗೋಲ್ಡನ್ ಬಣ್ಣ ಬರುವವರೆಗೆ ಪ್ರೈ ಮಾಡಿ. ಜೊತೆಗೆ ಗೋಡಂಬಿ ಅಥವಾ ಕಡಲೇ ಕಾಯಿ, ಶುಂಠಿ ಮತ್ತು ಟೊಮೇಟೋ ಸೇರಿಸಿ ಸ್ವಲ್ಪ ಹೊತ್ತು ಬೇಯಲು ಬಿಡಿ.

ಇದರೊಂದಿಗೆ ಬಟಾಣಿ, ಕ್ಯಾರೆಟ್ ಒಟ್ಟಿಗೆ ಸೇರಿಸಿ ಬೇಯಲು ಬಿಡಿ. ಈಗ ಇದಕ್ಕೆಬ ಬಾದಾಮಿ ಹಿಟ್ಟು ಸೇರಿಸಿ, ತಳ ಹಿಡಿಯದಂತೆ ಕೈಯಾಡಿಸುತ್ತಾ ಇರಿ.

ಕಡಿಮೆ ಉರಿಯಲ್ಲಿಟ್ಟು ಎರಡು ನಿಮಿಷಗಳ ಕಾಲ ಬೇಯಿಸಿ. ಈಗ ಇದರ ಕೊತ್ತಂಬರಿ ಸೊಪ್ಪು ಹಾಕಿ ಮತ್ತು ಉರಿಯಿಂದ ಕೆಳಗಿಳಿಸಿ.