ತುಳಸಿ ಗಿಡ ಒಣಗದಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಎಷ್ಟೇ ತುಳಸಿ ಗಿಡ ನೆಟ್ಟರೂ ಸರಿಯಾಗಿ ಬೆಳೆಯುವುದಿಲ್ಲ, ಒಣಗುತ್ತದೆ ಎಂಬುದು ಸಾಕಷ್ಟು ಜನರ ಸಮಸ್ಯೆ.

ಇದಲ್ಲದೇ ತುಳಸಿ ಗಿಡ ಒಣಗಿದರೆ ಮನೆಗೆ ಅಶುಭ ಎಂಬ ನಂಬಿಕೆಯು ಇದೆ. 

ಆದ್ದರಿಂದ ನಿಮ್ಮ ಮನೆಯಲ್ಲಿ ನೆಟ್ಟ ತುಳಸಿ ಗಿಡ ಚೆನ್ನಾಗಿ ಬೆಳೆಯಲು ಈ ಸಲಹೆಗಳನ್ನು ಪಾಲಿಸಿ.

ಜಾಸ್ತಿ ನೀರು ಹಾಕಬೇಡಿ. ಜಾಸ್ತಿ ನೀರು ಸುರಿಯುವುದು ಬೇರು ಕೊಳೆಯಲು ಕಾರಣವಾಗುತ್ತದೆ.

ಬೆಳಗ್ಗಿನ ಸೂರ್ಯನ ಬೆಳಕು ಗಿಡ ಮೇಲೆ ಸರಿಯಾಗಿ ಬೀಳುವ ಜಾಗದಲ್ಲಿ ಗಿಡ ನೆಡಿ. 

ಪ್ರತೀ ಎರಡು ವಾರಗಳಿಗೊಮ್ಮೆ ತುಳಸಿ ಗಿಡಕ್ಕೆ ಗೊಬ್ಬರವನ್ನು ಹಾಕಿ. 

ಸೆಗಣಿ ಹಾಕಿ, ಇದು ಗಿಡಗಳು ಚೆನ್ನಾಗಿ ಬೆಳೆಯಲು ಒಂದು ಉತ್ತಮ ಗೊಬ್ಬರವಾಗಿದೆ.