ಸಾವಿರ ವಿದ್ಯಾರ್ಥಿಗಳಿಂದ ರೂಬಿಕ್ಸ್ ಕ್ಯೂಬ್ ಮೂಲಕ 2 ಗಿನ್ನೆಸ್ ವಿಶ್ವ ದಾಖಲೆಗೆ ಪ್ರಯತ್ನ
30 Nov 2023
Author: Kiran Hanumant Madar
ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ರಜತ ಮಹೋತ್ಸವದ ವರ್ಷವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿಕೊಳ್ಳುತ್ತಿದೆ.
ವಸತಿ ಶಾಲೆ
ಈ ಸಂಸ್ಥೆ ಶೈಕ್ಷಣಿಕ ಉತ್ಕೃಷ್ಟತೆಯನ್ನು ಪೋಷಿಸಲು ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಯನ್ನು ಉತ್ತೇಜಿಸಲು ಕಳೆದ 25 ವರ್ಷಗಳ ಕಾಲ ಅವಿರತವಾಗಿ ಪ್ರಯತ್ನಿಸಿದೆ.
25 ವರ್ಷ
ಈ ಮೈಲಿಗಲ್ಲನ್ನು ಪ್ರತಿಬಿಂಬಿಸುವ ಐತಿಹಾಸಿಕ ಪ್ರಯತ್ನವಾಗಿ ಸಂಸ್ಥೆಯು ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ಸಾಧಿಸುವ ಗುರಿಯ ಪ್ರಯತ್ನದಲ್ಲಿದೆ.
ಗಿನ್ನೆಸ್ ವಿಶ್ವ ದಾಖಲೆ
ಕಝಾಕಿಸ್ತಾನದ ಝೆಂಗಿಸ್ ಐಟ್ಜಾನೋವ್,ರೂಬಿಕ್ಸ್ ಕ್ಯುಬ್ ಮೊಸಾಯಿಕ್ ಗಿನ್ನಿಸ್ ದಾಖಲೆ ಮತ್ತು ರೂಬಿಕ್ಸ್ ಬ್ರಾಂಡ್ ಲಿಮಿಟೆಡ್ ಸಾಧಿಸಿದ್ದರು.
ರೂಬಿಕ್ಸ್ ಬ್ರಾಂಡ್
ಈ ದಾಖಲೆಯನ್ನು ಶಾಲೆಯ 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರೂಬಿಕ್ಸ್ ಕ್ಯೂಬ್ ನ ಮೊಸಾಯಿಕ್ ರಚಿಸುವ ಮೂಲಕ ಮುರಿಯುವ ಪ್ರಯತ್ನದಲ್ಲಿದ್ದಾರೆ.
ರೂಬಿಕ್ಸ್ ಕ್ಯೂಬ್ ನ ಮೊಸಾಯಿಕ್
ಸಿದ್ಧಿವಿನಾಯಕ ವಸತಿ ಶಾಲೆ ಮಕ್ಕಳು ಗಿನ್ನಿಸ್ ದಾಖಲೆ ಹೊಸ್ತಿಲಿನಲ್ಲಿದ್ದಾರೆ.
ಶಾಲೆ ಮಕ್ಕಳು
ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ಬಳಸಲಾಗುವ ರೂಬಿಕ್ಸ್ ಕ್ಯೂಬ್‌ಗಳನ್ನು ಹತ್ತಿರದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸುವ ಗುರಿಯನ್ನು ಹೊಂದಿರುವುದು ಶಿಕ್ಷಣ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಗಿದೆ.
ರೂಬಿಕ್ಸ್ ಕ್ಯೂಬ್
ವಿದ್ಯಾರ್ಥಿಗಳ ಬೆಳವಣಿಗೆಗೆ ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸುವ ನೆಲೆಯಲ್ಲಿ ಈ ಪ್ರಯತ್ನ ಮಾಡಲಾಗಿದೆ.
ಅವಕಾಶ ಸೃಷ್ಟಿ
ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ; ಕಣ್ಮನ ಸೆಳೆದ ಪುತ್ತರಿ ಕೋಲಾಟ