ಜಮ್ಮುವಿನಲ್ಲಿ ನೂತನವಾಗಿ ನಿರ್ಮಾಣಗೊಂಡ ತಿರುಪತಿ ಬಾಲಾಜಿ ದೇವಸ್ಥಾನ
ಬಾಲಾಜಿ ದೇವಸ್ಥಾನವನ್ನು ಗೃಹ ಸಚಿವ ಅಮಿತ್ ಶಾ ಇಂದು(ಜೂ.08) ಉದ್ಘಾಟಿಸಿದ್ದಾರೆ.
ಜಮ್ಮು ದೇವಾಲಯವು ಆಂಧ್ರಪ್ರದೇಶದ ಹೊರಗೆ ನಿರ್ಮಿಸಲಾದ ಆರನೇ ಬಾಲಾಜಿ ದೇವಾಲಯವಾಗಿದೆ.
ತಿರುಪತಿ ಬಾಲಾಜಿ ದೇವಸ್ಥಾನವು 62 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿದೆ.
ವೇದ ಪಾಠಶಾಲೆ, ಹಾಸ್ಟೆಲ್, ಕೊಠಡಿಗಳು, ಕಲ್ಯಾಣಮಂಟಪವನ್ನು ದೇವಾಲಯದ ಆವರಣದಲ್ಲಿ ಕಾಣಬಹುದು.
ಗರ್ಭಗುಡಿಯಲ್ಲಿ 8 ಅಡಿ ಎತ್ತರದ ವೆಂಕಟೇಶ್ವರನ ವಿಗ್ರಹವನ್ನು ಸಹ ಸ್ಥಾಪಿಸಲಾಗಿದೆ.
ಈ ದೇವಾಲಯದ ಭೂಮಿ ಪೂಜೆಯನ್ನು 2021ರ ಜೂನ್ 13ರಂದು ಮಾಡಲಾಗಿತ್ತು.