rajasthan has a temple of rats

25,000 ಕ್ಕೂ ಹೆಚ್ಚು ಇಲಿಗಳನ್ನು ನೀವು ರಾಜಸ್ಥಾನದ ಬಿಕಾನೇರ್‌ನಲ್ಲಿರುವ ಕರ್ಣಿ ಮಾತಾ ಮಂದಿರದಲ್ಲಿ ಕಾಣಬಹುದು. ಇದು ದೇಶದ ಅತ್ಯಂತ ವಿಶಿಷ್ಟ ಆಕರ್ಷಣೆಗಳಲ್ಲಿ ಒಂದಾಗಿದೆ.

Eiffel tower

ಐರನ್ ಲೇಡಿ ಆಫ್ ಪ್ಯಾರೀಸ್ ಎಂದು ಕರೆಯಾಲಾಗುವ ವಿಶ್ವದ ಏಳು ಅದ್ಭುತಗಳಲ್ಲೊಂದಾದ ಐಫೆಲ್ ಟವರ್ ಬೇಸಿಗೆಯ ಸಮಯದಲ್ಲಿ 15 ಸೆ.ಮೀ ರಷ್ಟು ಎತ್ತರ ಹೆಚ್ಚಾಗುತ್ತದೆ ಎಂದು ನಿಮಗೆ ಗೊತ್ತಾ?

chenab bridge

ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಚೆನಾಬ್. ಇದು ಜಮ್ಮು ಮತ್ತು ಕಾಶ್ಮೀರದಲ್ಲಿದ್ದು, 359 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದೆ. 

Mawsynram, Meghalaya

ಭಾರತದ ಮೇಘಾಲಯದಲ್ಲಿರುವ ಮೌಸಿನ್ರಾಮ್ ವಿಶ್ವದ ಹೆಚ್ಚಿನ ತೇವಾಂಶವನ್ನು ಹೊಂದಿರುವ ಭೂಭಾಗವಾಗಿದೆ. ವಾರ್ಷಿಕವಾಗಿ ಸುಮಾರು 11,873 ಮಿಲಿಮೀಟರ್ ಮಳೆ ಇಲ್ಲಿ ಸುರಿಯುತ್ತದೆ. ಇದೇ ಕಾರಣಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿಯನ್ನು ಗೆದ್ದಿದೆ. 

guinea pigs

ಮೊಲದ ಜಾತಿಯನ್ನು ಹೋಲುವ ಸಾಕುಪ್ರಾಣಿಯಾಗಿ ಅಥವಾ ಪ್ರಯೋಗಾಲಯ ಸಂಶೋಧನೆಗಾಗಿ ಇರಿಸಲಾಗುವ ಈ ಪ್ರಾಣಿಯನ್ನು ಸ್ವಿಟ್ಜರ್ಲೆಂಡ್‌ನ ಅನಿಮಲ್ ಪ್ರೊಟೆಕ್ಷನ್ ಆರ್ಡಿನೆನ್ಸ್‌ನ 13 ನೇ ವಿಧಿಯ ಅಡಿಯಲ್ಲಿ ಸಾಕುವುದು ಅಪರಾಧವಾಗಿದೆ. 

kit kat

ಜಪಾನ್ ನಲ್ಲಿ ಕಿಟ್ ಕ್ಯಾಟ್ ಚಾಕೊಲೇಟ್ ಬಾಳೆ ಹಣ್ಣು, ಬ್ಲೂ ಬೆರಿ, ಆಲೂಗಡ್ಡೆ ಸೇರಿದಂತೆ 200 ಫ್ಲೇವರ್ ಗಳಲ್ಲಿ ಲಭ್ಯವಿದೆ ಎಂದು ನಿಮಗೆ ತಿಳಿದಿದೆಯೇ?

hawai rainbow

2021 ರಲ್ಲಿ ಅಮೇರಿಕನ್ ಮೆಟಿಯೊಲಾಜಿಕಲ್ ಸೊಸೈಟಿ ಪ್ರಕಟಿಸಿದ ಅಧ್ಯಯನವು ಮಳೆಬಿಲ್ಲುಗಳನ್ನು ನೋಡಲು ವಿಶ್ವದ ಅತ್ಯುತ್ತಮ ಸ್ಥಳ ಹವಾಯಿ ಎಂದು ತಿಳಿಸಿದೆ.