ಲಾವಂಚ ಬೇರಿನಿಂದ  ಹಲವು ಉಪಯೋಗ:  ಈ ಬೇರಿನಿಂದ ಏನೆಲ್ಲಾ ಮಾಡಬಹುದು ಗೋತ್ತಾ?

ಮಣ್ಣಿನ ಮಡಿಕೆಯೊಳಗಿನ ನೀರಿಗೆ ಲಾವಂಚ ಬೇರನ್ನು ಹಾಕಿ ದಿನನಿತ್ಯ ಸೇವಿಸುವುದರಿಂದ ದೇಹವ ಉಷ್ಣಾಂಶ ತಗ್ಗುತ್ತದೆ.

ಲಾವಂಚ ಎಣ್ಣೆಯನ್ನು ತಲೆಗೆ ಹಾಕುವುದರಿಂದ ಕೂದಲು ಉದ್ದ ಬೆಳೆಯುವುದರ ಜೊತೆಗೆ ಬಲಿಷ್ಠವಾಗಿರುತ್ತದೆ. 

ಲಾವಂಚ ಫೇಸ್ ಪ್ಯಾಕ್: ಲಾವಂಚ ನೀರನ್ನು ಶ್ರೀಗಂಧದ ಪುಡಿಗೆ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಹೋಗಿ ಮುಖದ ಕಳೆ ಹೆಚ್ಚುತ್ತದೆ.

ಲಾವಂಚ ಬೇರನ್ನು ಮನೆಯೊಳಗೆ ಇಡುವುದರಿಂದ ಸೊಳ್ಳೆಯಂತಹ ಕ್ರಿಮಿ-ಕೀಟಗಳು ಮನೆಯೊಳಗೆ ಬರುವುದಿಲ್ಲ

ಲಾವಂಚ ಬೇರಿನ ಚಾಪೆ ಬಳಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗೆಯೆ ಬೇಸಿಗೆಯಲ್ಲಿ ಲಾವಂಚ ಬೇರಿನ ಟೋಪಿಗಳನ್ನು ಬಳಸಬಹುದು.

ಅಲಂಕೃತ ವಸ್ತುವಾಗಿ ಲಾವಂಚ ಬೇರನ್ನು ಬಳಸಬಹುದು. ಅದ್ಬುತ ಮನೆ ಅಲಂಕಾರಿಕ ವಸ್ತುಗಳನ್ನು ಈ ಬೇರಿನಿಂದ ತಯಾರಿಸಬಹುದು