ಜನರ ಮೆಚ್ಚುಗೆಗೆ ಪಾತ್ರವಾದ 'ಸೀತಾರಾಮ' ಜೋಡಿ

ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ನಟನೆಯ  ‘ಸೀತಾ ರಾಮ’ ಧಾರಾವಾಹಿ ಭಾರೀ ಸದ್ದು ಮಾಡುತ್ತಿದೆ.

ಪ್ರಾರಂಭವಾಗುವ ಮುನ್ನವೇ ಪ್ರೋಮೋ ಮತ್ತು ಟೈಟಲ್​​​ ಸಾಂಗ್​​ ಮೂಲಕ ಕನ್ನಡಿಗರ ಮನಕದ್ದಿದ್ದ ಧಾರಾವಾಹಿ. 

ಇದೀಗಾ ವೈಷ್ಣವಿ ಗೌಡ ಹಾಗೂ ಗಗನ್ ಚಿನ್ನಪ್ಪ ಜೋಡಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಇದಕ್ಕೂ ಮುನ್ನ ಅಗ್ನಿ ಸಾಕ್ಷಿಯ ಸನ್ನಿಧಿ ಪಾತ್ರದ ಮೂಲಕ ಮಿಂಚಿದ್ದ ವೈಷ್ಣವಿ ಗೌಡ.

ಗಗನ್ ಚಿನ್ನಪ್ಪ ಕೂಡ ಮಂಗಳ ಗೌರಿ ಸೀರಿಯಲ್​​​ ಮೂಲಕ ಸಾಕಷ್ಟು ಜನಮೆಚ್ಚುಗೆ ಪಡೆದುಕೊಂಡಿದ್ದರು.

ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಮಾತ್ರವಲ್ಲದೇ ಕ್ಯೂಟ್‌ ಮಗು ಸಿಹಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.

ರಾಮ ಸೀತೆಯ ನಡುವೆ ಆಪ್ತತೆ ಬೆಳೆಯಲು ಸಿಹಿ ಸೇತುವೆಯಾಗುವ ಸುಂದರ ಕಥೆ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.