ವಿಜಯ್ ದೇವರಕೊಂಡ ಹಿಡಿದಿರು ಕೈ ಯಾರದ್ದು?
ಕೈಗಳ ಚಿತ್ರ ಹಂಚಿಕೊಂಡಿರುವ ವಿಜಯ್ ದೇವರಕೊಂಡ, ಇದು ಬಹಳ ವಿಶೇಷವಾದುದು ಎಂದಿದ್ದಾರೆ.
ಚಿತ್ರ ನೋಡಿದವರು ವಿಜಯ್ ದೇವರಕೊಂಡ ಎಂಗೇಜ್ ಆಗಿದ್ದಾರೆ ಎನ್ನುತ್ತಿದ್ದಾರೆ.
ಇನ್ನು ಕೆಲವರು ಇದು ಕೇವಲ ಗಿಮಿಕ್ ಅಷ್ಟೆ, ಹೊಸ ಸಿನಿಮಾ ಘೋಷಣೆಗೆ ಮಾಡುತ್ತಿರುವ ಪ್ರಚಾರ ತಂತ್ರ ಎಂದಿದ್ದಾರೆ.
ವಿಜಯ್ ದೇವರಕೊಂಡ ನಟನೆಯ ಖುಷಿ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ.
ಸಮಂತಾ ಜೊತೆಗೆ ಖುಷಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದು, ಸಿನಿಮಾ ಟ್ರೈಲರ್ ಬಿಡುಗಡೆ ಆಗಿದೆ.
ವಿಜಯ್ ದೇವರಕೊಂಡ ಹಾಗೂ ಸಮಂತಾರ ಹಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ವಿಜಯ್ ದೇವರಕೊಂಡ ಹಾಗೂ ಸಮಂತಾ ನಡುವಿನ ಆಪ್ತತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗಾಸಿಪ್ ಹರಿದಾಡುತ್ತಿದೆ.
ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಎನಿಸಿಕೊಂಡಿರುವ ವಿಜಯ್ ಏನು ಸಿಹಿ ಸುದ್ದಿ ಕೊಡುತ್ತಾರೋ ನೋಡಬೇಕಿದೆ.