ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಊರ್ಫಿ ಜಾವೇದ್ ಹೊಸ ಲುಕ್ ಇಲ್ಲಿದೆ ನೋಡಿ
ಊರ್ಫಿ ಜಾವೇದ್ ಹೆಸರು ಕೇಳಿದ ಕೂಡಲೇ ಮೊದಲಿಗೆ ಆಕೆಯ ಪ್ಲಾಸ್ಟಿಕ್ ಹಾಗೂ ಪಿನ್ ನಿಂದ ತಯಾರಿಸಿದ ಬಟ್ಟೆಗಳೇ ನೆನಪಿಗೆ ಬರುವುದು.
ತಾನು ಧರಿಸುವ ವಿಕಾರವಾದ ಬಟ್ಟೆಗಳಿಂದಲೇ ಸದಾ ಟ್ರೋಲ್ ಆಗುತ್ತಿರುವ ನಟಿ ಊರ್ಫಿ ಜಾವೇದ್
ಆದರೆ ಇತ್ತೀಚೆಗೆ ಊರ್ಫಿ ಜಾವೇದ್ ಲೆಹಾಂಗ ತೊಟ್ಟು ಪೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ತುಂಡುಡುಗೆಯಲ್ಲಿಯೇ ಪ್ರತೀ ಬಾರಿ ಕಾಣಿಸಿಕೊಳ್ಳುತ್ತಿದ್ದ ಈಕೆಯ ಹೊಸ ಲುಕ್ ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.
ಕಾಸ್ಟೂಮ್ ಡಿಸೈನರ್ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಈ ಉಡುಗೆಯನ್ನು ವಿನ್ಯಾಸಗೊಳಿಸಿದ್ದಾರೆ.
ಊರ್ಫಿ ಜಾವೇದ್ ಹೊಸ ಲುಕ್ ಆಕೆಯ ಅಂದವನ್ನು ಹೆಚ್ಚಿಸಿರುವುದನ್ನು ಕಾಣಬಹುದು.