ವಿಶ್ವದಾಖಲೆ ನಿರ್ಮಿಸಲು ಸಜ್ಜಾದ ವಿರಾಟ್ ಕೊಹ್ಲಿ

04-09-2023

ಏಷ್ಯಾಕಪ್'ನಲ್ಲಿಂದು ನಡೆಯಲಿರುವ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ-ನೇಪಾಳ ಮುಖಾಮುಖಿ ಆಗಲಿದೆ.

ಭಾರತ-ನೇಪಾಳ ಸೆಣೆಸಾಟ

ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ.

ಸಚಿನ್ ರೆಕಾರ್ಡ್ ಮೇಲೆ ಕೊಹ್ಲಿ ಕಣ್ಣು

ಕೊಹ್ಲಿಗೆ ಏಕದಿನ ಕ್ರಿಕೆಟಿನಲ್ಲಿ 13,000 ರನ್ ಪೂರೈಸಲು ಕೇವಲ 98 ರನ್'ಗಳ ಅವಶ್ಯತೆ ಇದೆ. ವಿರಾಟ್ ಸದ್ಯ 276 ಏಕದಿನ ಪಂದ್ಯಗಳಲ್ಲಿ 12,902 ರನ್ ಗಳಿಸಿದ್ದಾರೆ.

ಕೊಹ್ಲಿಗೆ ಬೇಕು 98 ರನ್ಸ್

ತೆಂಡೂಲ್ಕರ್ 13,000 ಏಕದಿನ ರನ್ ಪೂರೈಸಲು 321 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೀಗ ಕೊಹ್ಲಿ ತನ್ನ 276ನೇ ಇನ್ನಿಂಗ್ಸ್'ನಲ್ಲಿ ಸಚಿನ್ ಅವರ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.

ಸಚಿನ್ 321 ಇನ್ನಿಂಗ್ಸ್ ತೆಗೆದುಕೊಂಡಿದ್ದರು

ಸಚಿನ್ ಅವರು ಮಾರ್ಚ್ 16, 2004 ರಂದು ರಾವಲ್ಪಿಂಡಿಯಲ್ಲಿ ಪಾಕ್ ವಿರುದ್ಧ 13,000 ರನ್ ಗಳಿಸಿದರು. ಇದೀಗ 19 ವರ್ಷಗಳ ನಂತರ, ವಿರಾಟ್ 13,000 ರನ್ ಬಾರಿ ವಿಶ್ವದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ

ಪಾಕ್ ವಿರುದ್ಧ ಸಚಿನ್ ಸಾಧನೆ

ಕೊಹ್ಲಿ ಇಂದು 98 ರನ್ ಗಳಿಸಿದರೆ ಸಚಿನ್ ನಂತರ 13,000 ಏಕದಿನ ರನ್ ಗಡಿ ತಲುಪಿದ ಎರಡನೇ ಭಾರತೀಯ ಆಟಗಾರ ಎಂಬ ಸಾಧನೆ ಮಾಡಲಿದ್ದಾರೆ.

ಎರಡನೇ ಭಾರತೀಯ

ಭಾರತ ಹಾಗೂ ನೇಪಾಳ ನಡುವಣ ಪಂದ್ಯ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. 2:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

3 ಗಂಟೆಗೆ ಪಂದ್ಯ ಆರಂಭ

ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಆ್ಯಪ್ ಮೂಲಕ ಮೊಬೈಲ್‌ನಲ್ಲಿ ಉಚಿತವಾಗಿ ಕೂಡ ವೀಕ್ಷಿಸಬಹುದು.

ನೇರಪ್ರಸಾರ