ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ 25,000 ರನ್ ಗಳಿಸಿದ ವಿಶ್ವದಾಖಲೆಯನ್ನು ಕೊಹ್ಲಿ ಮಾಡಿದ್ದಾರೆ.

ಕೊಹ್ಲಿ ತಮ್ಮ ಮೊದಲ 5,000 ಅಂತರಾಷ್ಟ್ರೀಯ ರನ್‌ಗಳನ್ನು 138 ಇನ್ನಿಂಗ್ಸ್‌ಗಳಲ್ಲಿ ಪೂರ್ಣಗೊಳಿಸಿದರು.

ಆದರೆ ಆ ಬಳಿಕ ಕೇವಲ 132 ಇನ್ನಿಂಗ್ಸ್‌ಗಳಲ್ಲಿ 20 ರಿಂದ 25 ಸಾವಿರದವರೆಗಿನ ಪ್ರಯಾಣವನ್ನು ಕವರ್ ಮಾಡಿದ್ದಾರೆ.

ಈ ಮೂಲಕ 25,000 ಅಂತಾರಾಷ್ಟ್ರೀಯ ರನ್ ಗಳಿಸಿದ ವಿಶ್ವದ ಆರನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನೂ ಕೊಹ್ಲಿ ಬರೆದಿದ್ದಾರೆ.

ಅತಿ ವೇಗವಾಗಿ 25 ಸಾವಿರ ಅಂತರಾಷ್ಟ್ರೀಯ ರನ್ ಗಳಿಸಿದ ವಿಚಾರದಲ್ಲಿ ಕೊಹ್ಲಿ ಈಗ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕಿದ್ದಾರೆ.

ಅಲ್ಲದೆ ಸಚಿನ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಕೊಹ್ಲಿ.

 ಸಚಿನ್ ಒಟ್ಟು 664 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 34 ಸಾವಿರದ 357 ರನ್ ಕಲೆ ಹಾಕಿದ್ದಾರೆ.