ಪಾಕ್ ವಿರುದ್ಧ ಕೊನೆಯ 10 ಇನ್ನಿಂಗ್ಸ್​ಗಳಲ್ಲಿ ಕಿಂಗ್ ಕೊಹ್ಲಿ ಆಟ ಹೇಗಿದೆ ಗೊತ್ತಾ?

25 August 2023

ವಿರಾಟ್ ಕೊಹ್ಲಿ ಪಾಕ್ ವಿರುದ್ಧ ಕೇವಲ ಇದುವರೆಗೆ 13 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 48. 73 ಸರಾಸರಿ ಮತ್ತು 96 ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

25 August 2023

ಕಳೆದ 10 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಪಾಕ್ ವಿರುದ್ಧ 183 ಸೇರಿದಂತೆ ಎರಡು ಶತಕಗಳನ್ನು ಸಿಡಿಸಿದ್ದಾರೆ.

25 August 2023

ಶತಕಗಳ ಹೊರತಾಗಿ ಕೊನೆಯ 10 ಏಕದಿನ ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಎರಡು ಅರ್ಧ ಶತಕಗಳನ್ನು ಸಿಡಿಸಿದ್ದಾರೆ.

25 August 2023

2015ರಲ್ಲಿ ಪಾಕ್ ವಿರುದ್ಧ 126 ಎಸೆತಗಳಲ್ಲಿ 107 ರನ್ ಸಿಡಿಸಿ ತಂಡದ ಗೆಲುವಿಗೆ ಅಡಿಪಾಯ ಹಾಕಿದ್ದರು.

25 August 2023

ಕೊಹ್ಲಿ ಬಾರಿಸಿರುವ 2 ಅರ್ಧಶತಕಗಳಲ್ಲಿ ಒಂದು (81 ರನ್) 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಂದಿದ್ದರೆ, ಇನ್ನೊಂದು (77) ರನ್ 2019 ರ ವಿಶ್ವಕಪ್‌ನಲ್ಲಿ ಬಂದಿತ್ತು

25 August 2023

ಈ ಹತ್ತು ಇನ್ನಿಂಗ್ಸ್​ಗಳಲ್ಲಿ ಐದು ಬಾರಿ ಒಂದಂಕಿಗೆ ವಿಕೆಟ್​ ಒಪ್ಪಿಸಿದ್ದಾರೆ.

25 August 2023

ವಿರಾಟ್ ಕೊಹ್ಲಿಯ ಕೊನೆಯ 10 ಇನ್ನಿಂಗ್ಸ್​ಗಳ ಸ್ಕೋರ್‌- 183, 0, 6, 7, 22*, 5, 107, 81*, 5, 77

25 August 2023