ಗುಲ್ಮಾರ್ಗ್:  ಹಿಮದಿಂದ ಕೂಡಿದ ಭೂದೃಶ್ಯ, ಸ್ಕೀಯಿಂಗ್ ಮತ್ತು ಸ್ನೋಬೋರ್ಡಿಂಗ್‌ ಅನುಭವ ಪಡೆಯಿರಿ.

ಮನಾಲಿ, ಹಿಮಾಚಲ ಪ್ರದೇಶ:  ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಕ್ಷಣ ಕಳೆಯಬಹುದು.

ಔಲಿ, ಉತ್ತರಾಖಂಡ: ಚಳಿಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿ. ದಟ್ಟವಾದ ಹಿಮದ ಪದರದಿಂದ ಆವೃತವಾಗಿದ್ದು, ನೀವಿಲ್ಲಿ ಸ್ಕೀಯಿಂಗ್ ಕಲಿಯಬಹುದು.

ಬಿನ್ಸಾರ್, ಉತ್ತರಾಖಂಡ: ಇದು ಉತ್ತರಾಖಂಡದ ಒಂದು ಚಿಕ್ಕ ಗಿರಿಧಾಮವಾಗಿದ್ದು, ಚಳಿಗಾಲದಲ್ಲಿ ಭೇಟಿ ನೀಡಲು ಉತ್ತಮ ತಾಣವಾಗಿದೆ. 

ಗೋವಾ ಭಾರತದ ಆಕರ್ಷಕ ಪ್ರವಾಸಿ ತಾಣವಾಗಿದ್ದು, ನಿಮ್ಮ ಪ್ರೀತಿ ಪಾತ್ರರೊಂದಿಗೆ ಭೇಟಿ ನೀಡಿ ಈ ಚಳಿಗಾಲದಲ್ಲಿ ಉತ್ತಮ ಕ್ಷಣಗಳನ್ನು ಕಳೆಯಿರಿ. 

ಪಾಂಡಿಚೇರಿ: ಅಕ್ಟೋಬರ್ - ಮಾರ್ಚ್ ತಿಂಗಳ ಒಳಗೆ ಇಲ್ಲಿಗೆ ಭೇಟಿ ನೀಡಿ. ಇಲ್ಲಿನ ಹಳೆಯ ವಾಸ್ತು ಶೈಲಿ ಹಾಗೂ ಬೇಕರಿ ತಿಂಡಿಗಳನ್ನು ಆನಂದಿಸಿ.

ಲಕ್ಷದ್ವೀಪ: ಚಳಿಗಾಲದಲ್ಲಿ ಭೇಟಿ ನೀಡಬಹುದಾದ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸಾಕಷ್ಟು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.