ಆರೋಗ್ಯದ ದೃಷ್ಟಿಯಿಂದ ಮನೆಯೊಳಗೆ ಚಪ್ಪಲಿ ಧರಿಸುವುದು ಉತ್ತಮವೇ?

ಸಾಕಷ್ಟು ಜನರು ಮನೆಯೊಳಗೆ ಚಪ್ಪಲಿ ಧರಿಸುವ ಅಭ್ಯಾಸವನ್ನು ಹೊಂದಿರುತ್ತಾರೆ.

ಆರೋಗ್ಯಕ್ಕೆ ಸಂಬಂಧಪಟ್ಟಂತೆ ಮನೆಯೊಳಗೆ ಚಪ್ಪಲಿ ಧರಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.

ಚಪ್ಪಲಿ ಧರಿಸುವುದರಿಂದ ಪಾದ ಬೆಚ್ಚಗಿರುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

ನೆಲದ ಮೇಲಿನ ಬ್ಯಾಕ್ಟೀರಿಯಾ, ದೇಹದ ಸಂಪರ್ಕಕ್ಕೆ ಬರದಂತೆ ಚಪ್ಪಲಿ ತಡೆಯುತ್ತದೆ.

ಬರಿಗಾಲಿನಲ್ಲಿ ನೀವು ನಡೆದರೆ ಅದು ನಿಮ್ಮ ಪಾದದ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡಬಹುದು.

ಆದರೆ ಅತಿಯಾಗಿ ಚಪ್ಪಲಿ ಧರಿಸುವುರಿಂದ ದುಷ್ಪರಿಣಾಮಗಳು ಕೂಡ ಇವೆ.

ಹೆಚ್ಚು ಚಪ್ಪಲಿ ಧರಿಸಿಕೊಂಡೇ ಇರುವುದರಿಂದ ನೋವು ಮತ್ತು ಗುಳ್ಳೆಗಳಿಗೆ ಕಾರಣವಾಗಬಹುದು.

ಕಳಪೆ ಗುಣಮಟ್ಟದ ಚಪ್ಪಲಿಗಳು ಬಿಗಿತ ಮತ್ತು ಮೊಣಕಾಲಿನ ನೋವಿಗೂ ಕಾರಣವಾಗಬಹುದು