ಏನಿದು ಬಿಸಿಸಿಐ ನೀಡುತ್ತಿರುವ ಗೋಲ್ಡನ್ ಟಿಕೆಟ್: ಯಾರಿಗೆಲ್ಲ ಸಿಕ್ಕಿದೆ?

09 September 2023

Pic credit - Google

ಬಿಸಿಸಿಐ ಮುಖ್ಯ ಕಾರ್ಯದರ್ಶಿ ಜಯ್ ಶಾ ಅವರು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿದ್ದಾರೆ. ಸಚಿನ್ ಅವರಿಗೆ ವಿಶ್ವಕಪ್ ಗೋಲ್ಡನ್ ಟಿಕೆಟ್ ನೀಡಿದ್ದಾರೆ.

ಸಚಿನ್ ತೆಂಡೂಲ್ಕರ್

Pic credit - Google

ಬಿಸಿಸಿಐ ಕೆಲವು ದಿನಗಳ ಹಿಂದೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ಕೂಡ ಈ ಗೋಲ್ಡನ್ ಟಿಕೆಟ್ ನೀಡಿತ್ತು.

ಅಮಿತಾಭ್ ಬಚ್ಚನ್

Pic credit - Google

ಭಾರತದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರಿಗೆ ಗೋಲ್ಡನ್ ಟಿಕೆಟ್ ಫಾರ್ ಇಂಡಿಯಾ ಐಕಾನ್ಸ್ ಕಾರ್ಯಕ್ರಮದ ಅಂಗವಾಗಿ ಬಿಸಿಸಿಐ ಗೌರವಿಸುತ್ತಿದೆ.

ಏನಿದು ಗೋಲ್ಡನ್ ಟಿಕೆಟ್?

Pic credit - Google

ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಭಾರತದ ದೊಡ್ಡ ಸಾಧಕರನ್ನು ಮಾತ್ರ ಆಹ್ವಾನಿಸಲು ಬಿಸಿಸಿಐ ಗೋಲ್ಡನ್ ಟಿಕೆಟ್‌ಗಳನ್ನು ನೀಡುತ್ತಿದೆ.

ಯಾರಿಗೆಲ್ಲ ಲಭ್ಯ?

Pic credit - Google

ಈ ಗೋಲ್ಡನ್ ಟಿಕೆಟ್ ಮೂಲಕ ವಿಶ್ವಕಪ್ ಪಂದ್ಯಗಳಿಗೆ ವಿಐಪಿ ಪ್ರವೇಶ ಪಡೆಯುತ್ತಾರೆ. ಅಲ್ಲದೆ ಇವರು ಎಲ್ಲಾ ಪಂದ್ಯಕ್ಕೂ ಹಾಜರಾಗಬಹುದು.

ವಿಐಪಿ ಪ್ರವೇಶ

Pic credit - Google

ಗೋಲ್ಡನ್ ಟಿಕೆಟ್ ಪಡೆದ ವ್ಯಕ್ತಿಗೆ ಸಂಪೂರ್ಣವಾಗಿ ಎಲ್ಲವೂ ಉಚಿತವಾಗಿರುತ್ತದೆ. ಪ್ರತಿ ಕ್ರೀಡಾಂಗಣದಲ್ಲಿ ವಿಐಪಿ ಬಾಕ್ಸ್‌ಗಳಿಂದ ಹಿಡಿದು ಇತರ ಎಲ್ಲಾ ಸೌಲಭ್ಯಗಳೊಂದಿಗೆ ವೀಕ್ಷಿಸಬಹುದು.

ಎಲ್ಲವೂ ಉಚಿತ

Pic credit - Google

ಅಕ್ಟೋಬರ್ 5 ರಂದು ವಿಶ್ವಕಪ್ ಟೂರ್ನಿಗೆ ಚಾಳನೆ ಸಿಗಲಿದೆ. ಒಟ್ಟು 46 ದಿನಗಳಲ್ಲಿ 48 ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಲಿದೆ.

ಅ. 5ಕ್ಕೆ ಚಾಲನೆ

Pic credit - Google

ಭಾರತ ತಂಡ ಅಕ್ಟೋಬರ್‌ 8 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.

ಭಾರತದ ಪಂದ್ಯ

Pic credit - Google

ಕೊಲಂಬೊದಲ್ಲಿ ರೋಹಿತ್ ಪಡೆಯ ಅಭ್ಯಾಸ ಹೇಗಿದೆ ನೋಡಿ

Pic credit - Google