Asia Cup 2023:
ಭಾರತ-ನೇಪಾಳ ಪಂದ್ಯ ಯಾವಾಗ?, ಎಲ್ಲಿ?
03 September 2023
ಏಷ್ಯಾಕಪ್'ನಲ್ಲಿ ಭಾರತ ಹಾಗೂ ನೇಪಾಳ ತಂಡಗಳು ಸೆಪ್ಟೆಂಬರ್ 4 ಸೋಮವಾರದಂದು ಮುಖಾಮುಖಿ ಆಗಲಿದೆ.
ಭಾರತ-ನೇಪಾಳ ಪಂದ್ಯ ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.
ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. 2:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಹೀಗಾಗಿ ಮುಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲೇ ಬೇಕಿದೆ.
ಮುಂದಿನ ಹಂತಕ್ಕೆ ತೇರ್ಗಡೆ ಆಗಲು ರೋಹಿತ್ ಶರ್ಮಾ ಪಡೆ ನೇಪಾಳ ವಿರುದ್ಧ ಗೆಲ್ಲಬೇಕು ಅಥವಾ ಪಂದ್ಯ ಮಳೆಯಿಂದ ರದ್ದಾಗಬೇಕು.
ನೇಪಾಳ ವಿರುದ್ಧ ಟೀಮ್ ಇಂಡಿಯಾ ಸೋತರೆ ಏಷ್ಯಾಕಪ್ ಟೂರ್ನಿಯಿಂದ ಹೊರಬೀಳಲಿದೆ. ಸದ್ಯ ಭಾರತದ ಖಾತೆಯಲ್ಲಿ 1 ಅಂಕ ಇದೆಯಷ್ಟೆ.
ಭಾರತ-ನೇಪಾಳ ನಡುವಿನ ಪಂದ್ಯಕ್ಕೂ ವರುಣನ ಕಾಟ ಇರಲಿದೆ ಎಂದು ಹೇಳಲಾಗಿದೆ. ಪಂದ್ಯ ನಡೆಯುವ ಸಂದರ್ಭ ಶೇ. 76 ರಷ್ಟು ಮಳೆಯಾಗಲಿದೆಯಂತೆ.
ಪಾಕ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 266 ರನ್ನಿಗೆ ಆಲೌಟ್ ಆಯಿತು. ಬ್ರೇಕ್ ವೇಳೆ ಶುರುವಾದ ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು.
ಇನ್ನಷ್ಟು ಓದಿ