05-09-2023
ಮತ್ತೊಮ್ಮೆ ಭಾರತ-ಪಾಕಿಸ್ತಾನ ಮುಖಾಮುಖಿ: ಯಾವಾಗ?
S
S
ಸೂಪರ್-4ಗೆ ಭಾರತ
ಏಷ್ಯಾಕಪ್'ನ 5ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಜಯ ಸಾಧಿಸುವ ಮೂಲಕ ಭಾರತ ಕ್ರಿಕೆಟ್ ತಂಡ ಸೂಪರ್-4 ಹಂತಕ್ಕೆ ತೇರ್ಗಡೆ ಆಗಿದೆ.
S
S
ಭಾರತ-ಪಾಕಿಸ್ತಾನ
ಸೂಪರ್-4 ಹಂತದಲ್ಲಿ ಒಟ್ಟು 4 ತಂಡಗಳು ಪರಸ್ಪರ ಸೆಣಸಲಿದೆ. ಇಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಮುಖಾಮುಖಿ ಆಗಲಿದೆ.
S
S
ಸೆ. 10ಕ್ಕೆ ಪಂದ್ಯ
ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 10 ರಂದು ಮುಖಾಮುಖಿಯಾಗುವುದು ಖಚಿತವಾಗಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಪಂದ್ಯ ನಡೆಯಲಿದೆ.
S
S
ಫೈನಲ್'ನಲ್ಲೂ ಮುಖಾಮುಖಿ
ಸೂಪರ್-4 ಹಂತದ ಅಂಕ ಪಟ್ಟಿಯಲ್ಲಿ ಉಭಯ ತಂಡಗಳು ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದರೆ ಏಷ್ಯಾಕಪ್ ಫೈನಲ್'ನಲ್ಲೂ ಇಂಡೋ-ಪಾಕ್ ಕಾದಾಡಲಿದೆ.
S
S
10 ವಿಕೆಟುಗಳ ಜಯ
ನೇಪಾಳ ವಿರುದ್ಧ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಭಾರತ ತಂಡ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 10 ವಿಕೆಟುಗಳ ಅಮೋಘ ಜಯ ಸಾಧಿಸಿತು.
S
S
231 ರನ್ಸ್ ಟಾರ್ಗೆಟ್
ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ 48.2 ಓವರುಗಳಲ್ಲಿ 230 ರನ್'ಗಳಿಗೆ ಆಲೌಟ್ ಆಯಿತು. ಸೋಂಪಾಲ್ ಕಮಿ 56 ಎಸೆತಗಳಲ್ಲಿ 48 ರನ್ ಬಾರಿಸಿದರು.
S
S
ಸಿರಾಜ್-ಜಡೇಜಾ 3 ವಿಕೆಟ್
ಟೀಮ್ ಇಂಡಿಯಾ ಪರ ಜಡೇಜಾ ಹಾಗೂ ಸಿರಾಜ್ ತಲಾ 3 ವಿಕೆಟ್ ಪಡೆದರೆ, ಶಮಿ, ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಒಂದೊಂದು ವಿಕೆಟ್ ಕಬಳಿಸಿದರು.
S
S
ಕೊಹ್ಲಿ-ಗಿಲ್ ಅರ್ಧಶತಕ
ಮಳೆ ಬಂದ ಕಾರಣ ಭಾರತಕ್ಕೆ 23 ಓವರ್'ಗಳಲ್ಲಿ 145 ರನ್ ಗುರಿ ನೀಡಲಾಯಿತು. ರೋಹಿತ್ (74), ಗಿಲ್ (67) 20.1 ಓವರ್'ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು.
ಇನ್ನಷ್ಟು ಓದಿ