ಏಕದಿನ ವಿಶ್ವಕಪ್‌ಗೆ ಭಾರತ ತಂಡ ಯಾವಾಗ ಪ್ರಕಟ?

ಭಾರತ ಕ್ರಿಕೆಟ್ ತಂಡ ಸದ್ಯ ಏಷ್ಯಾಕಪ್ 2023 ರಲ್ಲಿ ಬ್ಯುಸಿ ಆಗಿದೆ

ಆಕ್ಟೋಬರ್'ನಲ್ಲಿ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ

ಈ ಮಹತ್ವದ ಟೂರ್ನಿಗೆ ಈಗಾಗಲೇ ಹೆಚ್ಚಿನ ತಂಡಗಳು ಪ್ರಕಟವಾಗಿದೆ

ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಮಾತ್ರ ಬಿಸಿಸಿಐ ಇನ್ನೂ ಹೆಸರಿಸಿಲ್ಲ

ಇದೀಗ ವಿಶ್ವಕಪ್‌ಗೆ ಭಾರತ ತಂಡ ಮುಂದಿನ ವಾರ ಪ್ರಕಟವಾಗಲಿದೆಯಂತೆ

ರಾಷ್ಟ್ರೀಯ ಆಯ್ಕೆ ಸಮಿತಿಯು ಸೆ. 5 ರಂದು ಸಭೆ ಕರೆದು ತಂಡವನ್ನು ಹೆಸರಿಸಲಿದೆ

ಏಷ್ಯಾಕಪ್'ನಲ್ಲಿ ನೇಪಾಳ ವಿರುದ್ಧದ ಪಂದ್ಯದ ಮರುದಿನ ಭಾರತ ತಂಡ ಪ್ರಕಟವಾಗಲಿದೆ

ವಿಶ್ವಕಪ್'ಗೆ ತಂಡವನ್ನು ಪ್ರಕಟಿಸಲು ಕೊನೆಯ ದಿನಾಂಕ ಸೆ. 5 ಆಗಿದೆ