ಏಷ್ಯಾಕಪ್ ಬಿಟ್ಟು ಬುಮ್ರಾ ಭಾರತಕ್ಕೆ ಮರಳಲು ಕಾರಣವೇನು ಗೊತ್ತೇ?

04-09-2023

ಏಷ್ಯಾಕಪ್'ನಲ್ಲಿಂದು ಭಾರತ-ನೇಪಾಳ ಮುಖಾಮುಖಿ ಆಗಲಿದೆ. ಈ ಮಾಡು ಇಲ್ಲವೇ ಮಡಿ ಪಂದ್ಯವನ್ನು ಪಲ್ಲಕೆಲೆ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

ಭಾರತ-ನೇಪಾಳ ಮುಖಾಮುಖಿ

ಇಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಮಾತ್ರ ಮುಂದಿನ ಹಂತಕ್ಕೇರಲಿದೆ. ಆದರೆ, ಇದಕ್ಕೂ ಮುನ್ನ ಭಾರತಕ್ಕೆ ಆಘಾತ ಉಂಟಾಗಿದ್ದು ಜಸ್'ಪ್ರಿತ್ ಬುಮ್ರಾ ಸೇವೆ ಕಳೆದುಕೊಂಡಿದೆ.

ಮಹತ್ವದ ಪಂದ್ಯಕ್ಕಿಲ್ಲ ಬುಮ್ರಾ

ಬುಮ್ರಾ-ಸಂಜನಾ ಗಣೇಶನ್ ದಂಪತಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿಯೇ ಯಾರ್ಕರ್ ಕಿಂಗ್ ದಿಢೀರ್ ಆಗಿ ಭಾರತಕ್ಕೆ ತೆರಳಿದ್ದಾರೆ.

ಮೊದಲ ಮಗುವಿನ ನಿರೀಕ್ಷೆ

ಬುಮ್ರಾ ಕೆಲವೇ ದಿನಗಳಲ್ಲಿ ಪುನಃ ತಂಡ ಸೇರಿಕೊಳ್ಳಲಿದ್ದಾರೆ. ಭಾರತ ಸೂಪರ್-4 ಹಂತಕ್ಕೇರಿದರೆ ಮುಂದಿನ ಪಂದ್ಯದಲ್ಲಿ ಬುಮ್ರಾ ಆಡಲಿದ್ದಾರೆ.

ಕೆಲವೇ ದಿನದಲ್ಲಿ ವಾಪಾಸ್

ಜಸ್'ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಪರ ಇಂದು ಮೊಹಮ್ಮದ್ ಶಮಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಇಂದು ಶಮಿ ಕಣಕ್ಕೆ

ಭಾರತ ಹಾಗೂ ನೇಪಾಳ ನಡುವಣ ಮಹತ್ವದ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ. 2:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಪಂದ್ಯ ಎಷ್ಟು ಗಂಟೆಗೆ?

ಭಾರತ-ನೇಪಾಳ ಪಂದ್ಯಕ್ಕೂ ವರುಣನ ಕಾಟ ಇರಲಿದೆ ಎಂದು ಹೇಳಲಾಗಿದೆ. ಪಂದ್ಯ ನಡೆಯುವ ಸಂದರ್ಭ ಶೇ. 76 ರಷ್ಟು ಮಳೆಯಾಗುವ ಸಾಧ್ಯತೆ ಇದೆಯಂತೆ.

ಮಳೆ ಸಾಧ್ಯತೆ

ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್'ನಲ್ಲೂ ಲೈವ್ ವೀಕ್ಷಿಸಬಹುದು.

ನೇರಪ್ರಸಾರ