ಚಳಿಗಾಲದಲ್ಲಿ ಬೆಳಗ್ಗೆ ವಾಕಿಂಗ್

ಐದು ಪ್ರಯೋಜನಗಳು

ಹೃದಯದ ಆರೋಗ್ಯ: ಚಳಿಗಾಲದಲ್ಲಿ ಮುಂಜಾನೆ ಬಿಸಿಲಿಗೆ ನಡೆಯುವುದರಿಂದ ವಿಟಮಿನ್ ಡಿ ಮಟ್ಟ ಹೆಚ್ಚಾಗುತ್ತದೆ. ಇದು ನಿಮ್ಮ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ.

ಖಿನ್ನತೆ ಶಮನ: ಚಳಿಗಾಲದಲ್ಲಿ ವಾಕಿಂಗ್ ಖಿನ್ನತೆಯ ಲಕ್ಷಣಗಳನ್ನ ನಿರ್ವಹಿಸಲು ಮತ್ತು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ದೀರ್ಘಕಾಲದ ಬದುಕು: ಬೆಳಗ್ಗಿನ ಅರ್ಧಗಂಟೆ ನಡಿಗೆ ನಿಮ್ಮ ಅಕಾಲಿಕ ಮರಣದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ಮೂಳೆಗಳ ಬಲ: ಬೆಳಗ್ಗೆ ವಾಕಿಂಗ್ ಮಾಡುವುದರಿಂದ ಸಿಗುವ ವಿಟಮಿನ್ ಡಿ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆಸ್ಟಿಯೊಪೊರೋಸಿಸ್ ಕಾಯಿಲೆಗಳನ್ನು ದೂರವಿರಿಸುತ್ತದೆ.

ತೂಕ ನಿಯಂತ್ರಣ: ಫಾಸ್ಟ್​ಫುಡ್ ಆಹಾರ ಸೇವನೆಯಿಂದ ತೂಕ ಹೆಚ್ಚಳವಾಗುತ್ತದೆ. ಇದನ್ನು ನಿಯಂತ್ರಿಸಲು ವ್ಯಾಯಾಮ ಉತ್ತಮ ಮಾರ್ಗವಾಗಿದೆ. ವಾಕಿಂಗ್ ಮಾಡುವುದರಿಂದಲೂ ತೂಕ ಇಳಿಸಬಹುದು.