ಮುಟ್ಟಿನ ಸಮಯದಲ್ಲಿ ಸೇವಿಸಬೇಕಾದ ಆಹಾರಗಳು
ಋತುಸ್ರಾವದ ಪ್ರಾರಂಭಿಕ ಎರಡರಿಂದ ಮೂರು ದಿನಗಳು ಸಾಕಷ್ಟು ಕಿರಿಕಿಯನ್ನುಂಟು ಮಾಡುತ್ತದೆ.
ಈ ಸಮಯದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಅಗತ್ಯ.
ಆದ್ದರಿಂದ ಮುಟ್ಟಿನ ಸಮಯದಲ್ಲಿ ನಿಮ್ಮ ಆಹಾರ ಕ್ರಮ ಯಾವ ರೀತಿ ಇರಬೇಕು ಎಂಬುದಕ್ಕೆ ಮಾಹಿತಿ ಇಲ್ಲಿದೆ.
ರಾತ್ರಿ ನೆನೆಸಿಟ್ಟ ಒಣದ್ರಾಕ್ಷಿಯನ್ನು ಸೇವಿಸಿ. ಇದು ಮುಟ್ಟಿನ ಸೆಳೆತದಿಂದ ಮುಕ್ತಿ ನೀಡುತ್ತದೆ.
ಬೀಟ್ರೂಟ್: ಪೌಷ್ಟಿಕಾಂಶಗಳು ಹೇರಳವಾಗಿದ್ದು, ಕಿಬ್ಬೊಟ್ಟೆಯ ನೋವಿನಿಂದ ಮುಕ್ತಿ ನೀಡುತ್ತದೆ.
ನಿಂಬೆ ರಸ: ವಿಟಮಿನ್ ಸಿ ಸಮೃದ್ಧವಾಗಿದ್ದು, ಅಧಿಕ ರಕ್ತ ಸ್ರಾವವನ್ನು ತಡೆಯುತ್ತದೆ.
ವಾಲ್ನಟ್: ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದ್ದು, ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ.