ಒಂದು  ಹೆಣ್ಣಿನ ಜೀವನದಲ್ಲಿ ಗರ್ಭಧಾರಣೆ ಪ್ರಮುಖ ಘಟ್ಟವಾಗಿರುತ್ತದೆ.

ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ನಿಮ್ಮ ಜೀವನ ಕ್ರಮ ಯಾವ ರೀತಿಯಲ್ಲಿದೆ ಎಂಬುದು ಮುಖ್ಯವಾಗಿರುತ್ತದೆ.

ಆದ್ದರಿಂದ ಆರೋಗ್ಯಕರ ಸಂತಾನೋತ್ಪತ್ತಿಗಾಗಿ ಈ ಜೀವನಶೈಲಿಯನ್ನು ರೂಡಿಸಿಕೊಳ್ಳಿ.

ಧೂಮಪಾನ ತ್ಯಜಿಸಿ. ಧೂಮಪಾನವು ನಿಮ್ಮ ಆರೋಗ್ಯವನ್ನು ಕೆಡಿಸುವುದರ ಜೊತೆಗೆ ಭ್ರೂಣದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಆರೋಗ್ಯಕರ ಸಂತಾನೋತ್ಪತ್ತಿಗಾಗಿ ಗರ್ಭಾವಸ್ಥೆಯ ಸಮಯದಲ್ಲಿ ಮದ್ಯಪಾನ ಮಾಡದಿರಿ.

ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶಗಳು ಸಮೃದ್ದವಾಗಿರುವ ಸೊಪ್ಪು ತರಕಾರಿಗಳನ್ನು ಆಹಾರ ಕ್ರಮದಲ್ಲಿ ಜೋಡಿಸಿ.

ದಿನದಲ್ಲಿ ಒಂದಿಷ್ಟು ಹೊತ್ತು ಯೋಗಾಭ್ಯಾಸಕ್ಕಾಗಿ ಸಮಯ ಮೀಸಲಿಡಿ. ಮಾನಸಿಕ ಆರೋಗ್ಯವು ಅತ್ಯಂತ ಅಗತ್ಯ.