ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸೂಪರ್ ಫುಡ್ ಇಲ್ಲಿವೆ

ಪ್ರತಿ ವರ್ಷ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. 

ಜಾಗತಿಕವಾಗಿ ಆರೋಗ್ಯ ಜಾಗೃತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. 

ಬೆಳ್ಳುಳ್ಳಿಯು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. 

ಶುಂಠಿ ಉರಿಯೂತದ ಲಕ್ಷಣ ಹೊಂದಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ.

ಮೊಸರು ಪ್ರೋಬಯಾಟಿಕ್​​ ಅಂಶ ಹೊಂದಿದ್ದು, ಇದು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾದ ಬೆಳವಣೆಗೆಗೆ ಸಹಕರಿಯಾಗಿದೆ.

ಸಿಟ್ರಸ್​​ ಹಣ್ಣುಗಳಾದ ದ್ರಾಕ್ಷಿ, ನಿಂಬೆ ಮತ್ತು ಕಿತ್ತಳೆಯಂತಹ ಹಣ್ಣುಗಳಲ್ಲಿ ವಿಟಮಿನ್​​ ಅಂಶ ಹೇರಳವಾಗಿದ್ದು, ಇದು ಬಿಳಿ ರಕ್ತ ಕಣಗಳು ಹೆಚ್ಚಾಗಲು ಸಹಾಯ ಮಾಡುತ್ತದೆ.

ಬಾದಾಮಿಯಲ್ಲಿ  ವಿಟಮಿನ್​​ ಇ ಹೇರಳವಾಗಿದ್ದು, ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. 

ಅರಶಿನ ಉರಿಯೂತ ಹಾಗೂ ಉತ್ಕರ್ಷಣಾ ನಿರೋಧಕ ಗುಣಗಳನ್ನು ಹೊಂದಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ಗ್ರೀನ್​​ ಟೀಯಲ್ಲಿ ಆಂಟಿ ಆಕ್ಸಿಡೆಂಟ್​​ ಹೆಚ್ಚಿನ ಪ್ರಮಾಣದಲ್ಲಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.