ಹೆಪಟೈಟಿಸ್ ರೋಗವನ್ನು ಪ್ರಾರಂಭದಲ್ಲೇ ಗುರುತಿಸುವುದು ಹೇಗೆ?
ಪ್ರತಿ ವರ್ಷ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಲಾಗುತ್ತದೆ.
ಯಕೃತ್ತಿನಲ್ಲಿ ಉರಿಯೂತವನ್ನುಂಟು ಮಾಡುವ ರೋಗಗಳಿಗೆ ಹೆಪಟೈಟಿಸ್ ಎಂದು ಹೇಳಲಾಗುತ್ತದೆ.
ಆದ್ದರಿಂದ ಹೆಪಟೈಟಿಸ್ನ ಪ್ರಾರಂಭಿಕ ಲಕ್ಷಣಗಳನ್ನು ತಿಳಿದುಕೊಳ್ಳಿ.
ಹೆಪಟೈಟಿಸ್ ಯಕೃತ್ತಿನ ಉರಿಯೂತಕ್ಕೆ ಕಾರಣವಾಗಿ ನಂತರ ಹೊಟ್ಟೆಯುಬ್ಬರ ಉಂಟು ಮಾಡುತ್ತದೆ.
ಮೂತ್ರದ ಬಣ್ಣದಲ್ಲಿ ಬದಲಾವಣೆಯು ಹೆಪಟೈಟಿಸ್ನ ಪ್ರಾರಂಭಿಕ ಲಕ್ಷಣವಾಗಿರಬಹುದು.
ವಿಶ್ರಾಂತಿಯ ನಂತರವೂ ಅತಿಯಾದ ಆಯಾಸದ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯಬೇಡ.
ಆಗಾಗ್ಗೆ ವಾಕರಿಕೆ, ವಾಂತಿಯು ಹೆಪಟೈಟಿಸ್ನ ಪ್ರಾರಂಭಿಕ ಲಕ್ಷಣಗಳಾಗಿರಬಹುದು.
ಹಸಿವಿನ ನಷ್ಟ, ಅಥವಾ ಯಾವುದೇ ಆಹಾರ ಕಂಡಾಕ್ಷಣ ವಾಕರಿಕೆಯ ಲಕ್ಷಣಗಳು ಕಂಡು ಬರಬಹುದು.