'ನಮ್ಮೂರ ಮಂದಾರ ಹೂವೆ' ಸಿನಿಮಾ ಚಿತ್ರೀಕರಣಗೊಂಡ ತಾಣವೇ ಈ ಯಾಣ

ಯಾಣ ದಟ್ಟವಾದ ಕಲ್ಲು ಬಂಡೆ ಅರಣ್ಯ ಪ್ರದೇಶದಿಂದ ಕೂಡಿದ ಹಳ್ಳಿ ಜೊತೆಗೆ ಪ್ರವಾಸಿತಾಣವೂ ಹೌದು.

ಇದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿದ್ದು, ಪಶ್ಚಿಮ ಘಟ್ಟಗಳ ಸಹ್ಯಾದ್ರಿ ತಪ್ಪಲಿನಲ್ಲಿದೆ.

ಇಲ್ಲಿನ ಪ್ರಮುಖ ಆಕರ್ಷಣೆ ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರ ಈ ಎರಡು ಶಿಖರಗಳು ಕಡಿದಾದ ಕಪ್ಪು ಕಲ್ಲಿನಿಂದ ಕೂಡಿದೆ.

ಹಿಂದೂ ಪುರಾಣಗಳ ಪ್ರಕಾರ ಭಸ್ಮಾಸುರ ಭಸ್ಮವಾಗಿ ಹೋದ ತಾಣವೇ ಈ ಯಾಣ ಎಂದು ಹೇಳಲಾಗುತ್ತದೆ.

ವೈಜ್ಞಾನಿಕ ಕಾರಣ: ಸಾವಿರಾರು ವರ್ಷಗಳ ಹಿಂದೆ ಇಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದ್ದು, ಅದು ಬಂಡೆಗಳಾಗಿ ರೂಪುಗೊಂಡಿವೆ ಎಂದು ಹೇಳಲಾಗುತ್ತದೆ.

ಇಲ್ಲಿಂದ ಸರಿಯಾಗಿ ಸುಮಾರು 12 ಕಿಲೋ.ಮೀ ದೂರದಲ್ಲಿ 150 ಅಡಿ ಎತ್ತರದಿಂದ ಹರಿಯುವ ವಿಭೂತಿ ಜಲಪಾತವನ್ನು ಕಣ್ತುಂಬಿಸಿಕೊಳ್ಳಬಹುದು.

ಬೆಂಗಳೂರಿನಿಂದ ಸರಿಸುಮಾರು 467.4 ಕಿಲೋ ಮೀಟರ್​​​​ ದೂರದಲ್ಲಿರುವ ಈ ತಾಣಕ್ಕೆ ಒಮ್ಮೆ ಭೇಟಿ ನೀಡಿ.

ಶಿವರಾಜ್​​​ ಕುಮಾರ್ ಅಭಿನಯದ ನಮ್ಮೂರ ಮಂದಾರ ಹೂವೇ ಸಿನಿಮಾವು ಇದೇ ಜಾಗದಲ್ಲಿ ಚಿತ್ರೀಕರಣಗೊಂಡಿದ್ದು, ಮತ್ತೊಂದು ವಿಶೇಷ.