ನಕಾರಾತ್ಮಕ ಯೋಚನೆ ತೊಡೆದು ಹಾಕಲು ಸಹಾಯಕ ಈ ಯೋಗಾಸನಗಳು
ನಕಾರಾತ್ಮಕ ಆಲೋಚನೆಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು.
ಆದ್ದರಿಂದ ಈ ಆಸನಗಳನ್ನು ರೂಢಿಸಿಕೊಂಡು ಖಿನ್ನತೆಯಿಂದ ಹೊರ ಬನ್ನಿ.
ಬದ್ಧ ಕೋನಾಸನ: ಇದನ್ನು ಚಮ್ಮಾರ ಭಂಗಿ ಎಂದು ಕರೆಯುತ್ತಾರೆ. ಇದು ಖಿನ್ನತೆಗೆ ಶಮನಕಾರಿ ಚಿಕಿತ್ಸೆ.
ಸುಪ್ತ ಬದ್ಧ ಕೋನಾಸನ: ಈ ಯೋಗ ಭಂಗಿ ಮನಸ್ಸಿಗೆ ಶಕ್ತಿ ಹಾಗೂ ವಿಶ್ರಾಂತಿಯನ್ನು ನೀಡುತ್ತದೆ.
ಸೇತು ಬಂಧಾಸನ: ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ.
ಬಾಲಾಸನ: ಮಗುವಿನ ಭಂಗಿ ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ತೊಡೆದು ಹಾಕಲು ಸಹಾಯಕ.
ಮಾರ್ಜರಿಯಾಸನ: ಬೆನ್ನು ಮೂಳೆಯ ಆರೋಗ್ಯದಿಂದ ಹಿಡಿದು ಮಾನಸಿಕ ಆರೋಗ್ಯದ ವರೆಗೆ ಸಹಾಯಕವಾಗಿದೆ.