ಸೈನಸ್ ಸಮಸ್ಯೆಯ ಉಪಶಮನಕ್ಕಾಗಿ ಈ ಯೋಗಾಸನ ಭಂಗಿಗಳು ಇಲ್ಲಿವೆ.

ಸನೈಸ್ ಸಮಸ್ಯೆ ಕಾಡುತ್ತಿರುವಾಗ ಉಸಿರಾಟದಲ್ಲಿ ಸಾಕಷ್ಟು ತೊಂದರೆಗಳಾಗುತ್ತವೆ. ಆದ್ದರಿಂದ ಪ್ರಾಣಾಯಾಮ ಮಾಡುವುದು ಸೂಕ್ತವಾಗಿದೆ.

ಮತ್ಸ್ಯಾಸನ ಮಾಡುವುದರಿಂದ ದೇಹದ ಉಸಿರಾಟವನ್ನು ಸರಾಗಗೊಳಿಸುತ್ತದೆ ಮತ್ತು ಸೈನಸ್ ಸಮಸ್ಯೆಯನ್ನು ನಿವಾರಿಸುತ್ತದೆ.

ಕಪಾಲಭಾತಿ ಪ್ರಾಣಾಯಾಮವು ಉಸಿರಾಟದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ. ಶೀತ ಕೆಮ್ಮಿನಂತಹ ಸಮಸ್ಯೆಗಳಿಂದ ನಿಮ್ಮನ್ನು ದೂರವಿಡುತ್ತದೆ.

ಭಸ್ತಿಕಾ ಪ್ರಾಣಾಯಾಮ ಸೈನಸ್ ಮುಂತಾದ ಉಸಿರಾಟ ಅಥವಾ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳಿಂದ ಮುಕ್ತಿ ನೀಡುತ್ತದೆ.

ಸೇತು ಬಂಧಾಸನ: ಈ ಸೇತುವೆಯ ಭಂಗಿಯೂ ನಿಮ್ಮ ಶ್ವಾಸಕೋಶದ ಉಸಿರಾಟವನ್ನು ಸರಾಗಗೊಳಿಸುತ್ತದೆ. ಜೊತೆಗೆ ಅಸ್ತಮಾ, ಸೈನಸ್ ಸಮಸ್ಯೆಗಳನ್ನು ನಿವಾರಿಸುತ್ತದೆ.

ಭುಜಂಗಾಸನ ರಕ್ತ ಪರಿಚಲನೆಯನ್ನು ಸುಧಾರಿಸುವುದರ ಜೊತೆಗೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಉತ್ತಮ ಭಂಗಿಯಾಗಿದೆ.