ಬೇಸಿಗೆಯಲ್ಲಿ ಎಷ್ಟು ನೀರು, ಪಾನೀಯ ಕುಡಿದರೂ ಸಾಲದು. ಹೀಗಾಗಿ ದೇಹವನ್ನು ದ್ರವಾಂಶದಿಂದ ಕಾಪಾಡಲು ತಂಪು ಪಾನೀಯಗಳು ಬಹಳ ಉಪಯೋಗ

ಆಮ್ ಪನ್ನಾ ಮಹಾರಾಷ್ಟ್ರದಲ್ಲಿ ಸಿಗುವಂತಹ ತುಂಬಾ ರುಚಿಕರವಾದ ಪಾನೀಯ. ಮಾವಿನ ತಿರುಳನ್ನು ಬಳಸಿಕೊಂಡು ಅದಕ್ಕೆ ಜೀರಿಗೆ, ಕೊತ್ತಂಬರಿ ಮತ್ತು ಪುದೀನಾ ಎಲೆಗಳನ್ನು ಹಾಕಲಾಗುತ್ತದೆ.  

ಜೀರಿಗೆ ನೀರು ಜೀರಿಗೆ ಮತ್ತು ನೀರನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಜೀರಿಗೆಯನ್ನು ಹುರಿದುಕೊಂಡು, ಅದರ ಹುಡಿ ತಯಾರಿಸಿ ಅದನ್ನು ನೀರಿಗೆ ಮಿಶ್ರಣ ಮಾಡಿ ಕುಡಿಯಿರಿ.  

ಸತ್ತು ಶರ್ಬತ್ ಬಿಹಾರದಲ್ಲಿ ಬೇಸಗೆ ಸಮಯದಲ್ಲಿ ಹೆಚ್ಚು ಬಳಸಲ್ಪಡುವ ಪಾನೀಯವಾಗಿದೆ. ಇದನ್ನು ಸತ್ತು ಹಿಟ್ಟು, ಸಕ್ಕರೆ ಮತ್ತು ನೀರಿನಿಂದ ತಯಾರಿಸಬೇಕು.

ಮಜ್ಜಿಗೆ ಮಜ್ಜಿಗೆ ದೇಹವನ್ನು ತಂಪಾಗಿ ಇಡುವ ಜತೆಗೆ ಜೀರ್ಣಕ್ರಿಯೆ ಸರಾಗವಾಗಿಸುವುದು.

ಎಳನೀರು ಎಳನೀರು ಹದ ಸಿಹಿ ಹಾಗೂ ತಾಜಾತನ ನೀಡಿ ದೇಹಕ್ಕೆ ತಾಜಾತನ ಒದಗಿಸುತ್ತದೆ. ದೇಹಕ್ಕೆ ಎಲೆಕ್ಟ್ರೋಲೈಟ್ಸ್ ಒದಗಿಸಿ ನಿರ್ಜಲೀಕರಣ  ತಡೆಯುತ್ತದೆ.

ಕಬ್ಬಿನ ರಸ ಕಬ್ಬಿನ ರಸ ದೇಹಕ್ಕೆ ಶಕ್ತಿ ನೀಡುವುದು ಮತ್ತು ದೇಹದಲ್ಲಿ ಪ್ಲಾಸ್ಮಾ ಬೆಳವಣಿಗೆ ಹಾಗೂ ದ್ರವಾಂಶ ನಿಲ್ಲಲು ಸಹಕಾರಿ.

ಲಸ್ಸಿ ಪಂಜಾಬ್ ನಲ್ಲಿ ಹೆಚ್ಚಾಗಿ ಬಳಕೆ. ಇದಕ್ಕೆ ಪುದೀನಾ, ಅವಕಾಡೊ, ಬಾಳೆಹಣ್ಣು, ಮಾವಿನ ಹಣ್ಣು ಸೇರಿಸಿ ವಿವಿಧ ರೀತಿಯಿಂದ ತಯಾರಿಸಿಕೊಳ್ಳಿ.

ಬಾರ್ಲಿ ನೀರು ಬಾರ್ಲಿಯಲ್ಲಿ ಯಥೇಚ್ಛವಾದ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಕಾರ್ಬೋಹೈಡ್ರೇಟ್ ಅಂಶಗಳು ಅಡಗಿವೆ.

ಲಿಂಬೆ ನೀರು ಪಾನೀಯ ಲಿಂಬೆ ನೀರನ್ನು ಲಿಂಬೆ, ಸಕ್ಕರೆ, ಉಪ್ಪು ಮತ್ತು ನೀರು ಹಾಕಿ ತಯಾರಿಸುತ್ತಾರೆ. ಇದಕ್ಕೆ ಜೀರಿಗೆ ಹುಡಿ, ಕೊತ್ತಂಬರಿ, ಕರಿಮೆಣಸು, ಪುದೀನಾ ಇತ್ಯಾದಿಗಳನ್ನು ಹಾಕಿಕೊಂಡು ತಯಾರಿಸಬಹುದು.

ಕಲ್ಲಂಗಡಿ ಜ್ಯೂಸ್ ಕಲ್ಲಂಗಡಿ ಹಣ್ಣು ಜ್ಯೂಸ್ ತಾಜಾತನ ನೀಡುವುದು ಮತ್ತು ದೇಹವನ್ನು ಹೈಡ್ರೇಟ್ ಮಾಡುವಂತಹ ಶಕ್ತಿಯು ಇದರಲ್ಲಿ ಇದೆ.