ಸ್ಥಾನಮಾನಕ್ಕಾಗಿ ಆಸೆಪಟ್ಟವನಲ್ಲ: BY ವಿಜಯೇಂದ್ರ

ಬೆಂಗಳೂರು: ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ್ಯರಾಗಿ ನಿನ್ನೆ ನೇಮಕಗೊಂಡ ಬಿ ವೈ ವಿಜಯೇಂದ್ರ ಅವರು ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಗೆ ಭೇಟಿ ನೀಡಿ ಕೆಲ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು.

ನಂತರ ಸುದ್ದಿಗಾರರೊದಿಗೆ ಮಾತನಾಡಿದ ವಿಜಯೇಂದ್ರ, “ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಾನ್ಯ ಜೆಪಿ ನಡ್ಡಾ ಜೀ ಅವರು ನನ್ನನ್ನು ರಾಜ್ಯ ಬಿಜೆಪಿಗೆ ಉಪಾಧ್ಯಕ್ಷನಾಗಿ ಆರಿಸಿರುವುದು ಅತೀವ ಸಂತಸವನ್ನುಂಟು ಮಾಡಿದೆ, ನನಗೆ ಜವಾಬ್ದಾರಿ ವಹಿಸಿರುವ ಅವರಿಗೂ, ಪಕ್ಷದ ರಾಷ್ಟೀಯ ಮತ್ತು ರಾಜ್ಯ ನಾಯಕರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ,” ಎಂದರು

“ನಾನು ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ, ಸ್ಥಾನಮಾನಕ್ಕಾಗಿ ಯಾವತ್ತೂ ಆಸೆ ಇಟ್ಟುಕೊಂಡವನಲ್ಲ, ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ,” ಎಂದು ವಿಜಯೇಂದ್ರ ಹೇಳಿದರು,

ಪಕ್ಷದ ಸಂಘಟನೆಗೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆಂದ ಬಿವೈವಿ, ಸಂಪುಟ ವಿಸ್ತರಣೆ ಬಗ್ಗೆ ತನಗೇನೂ ಗೊತ್ತಿಲ್ಲ ಎಂದರು.

Related Tags:

Related Posts :

Category:

error: Content is protected !!