ಯಕ್ಷ ಪ್ರಶ್ನೆ: ಈ ಹಳೇ ಪ್ರೀಮಿಯರ್​ ಪದ್ಮಿನಿ​ ಕಾರನ್ನು ಚಲಾಯಿಸುತ್ತಿರೋರು ಯಾರು?

ಚೆನ್ನೈ: ಅಮೆರಿಕ ಸೇರಿದಂತೆ ಹಲವು ದೇಶಗಳು ಚಾಲಕರಹಿತ ವಾಹನಗಳನ್ನು ಸಂಶೋಧಿಸಲು ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೋಟ್ಯಂತರ ರೂಪಾಯಿ ಸಹ ಖರ್ಚು ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ನೆಟ್ಟಿಗ ಹಳೇ ಪ್ರೀಮಿಯರ್​ ಪದ್ಮಿನಿ ಕಾರು ಒಂದು ಚಾಲಕನಿಲ್ಲದೆ ಸಾಗುತ್ತಿರುವ ಕುತೂಹಲಕಾರಿ ವಿಡಿಯೋವನ್ನು ಹರಿಬಿಟ್ಟಿದ್ದಾನೆ.

ಹೌದು, ತಮಿಳುನಾಡಿನ ಠಾಗೋರ್​ ಚೆರಿ ಎಂಬುವವರು ಈ ರೋಚಕ ವಿಡಿಯೋವನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಠಾಗೋರ್​ಗೆ ಈ ಆಶ್ಚರ್ಯಕರ ದೃಶ್ಯ ಕಂಡುಬಂದಿದೆ. ಪ್ರೀಮಿಯರ್​ ಪದ್ಮಿನಿಯಲ್ಲಿ ಓರ್ವ ವೃದ್ಧರು ಮಾಸ್ಕ್​ ಧರಿಸಿ ಪ್ರಯಾಣಿಕರ ಸೀಟ್​ನಲ್ಲಿ ಕೂತಿರುವುದು ಕಂಡುಬಂದಿದೆ. ಆದರೆ, ಚಾಲಕನ ಸೀಟ್​ ಮಾತ್ರ ಖಾಲಿ ಖಾಲಿ!

ಈ ವಿಡಿಯೋವನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಠಾಗೋರ್​ ಅರೇ ಇದು ಹೇಗೆ ಸಾಧ್ಯ ಎಂಬ ಯಕ್ಷ ಪ್ರಶ್ನೆಯನ್ನು ಕೇಳಿದ್ದಾರೆ. ಸದ್ಯ, ಠಾಗೋರ್​ ಹರಿಬಿಟ್ಟಿರುವ ಈ ವಿಡಿಯೋ ಸಿಕ್ಕಾಪಟ್ಟೆ ಟ್ರೆಂಡ್​ ಆಗ್ತಿದೆ.

Today saw something a old man driving his padmini car sitting in passenger seat WTF 😂How is this possibleTo use this video in a commercial player or in broadcasts, please email licensing@storyful.com”

Tagore Cherry यांनी वर पोस्ट केले गुरुवार, ८ ऑक्टोबर, २०२०

Related Tags:

Related Posts :

Category:

error: Content is protected !!