ಕೊಲೆ ಮಾಡಿ ಅಪಘಾತವೆಂದ್ರು, ಆದ್ರೆ ಪೊಲೀಸ್ರು ಬಯಲಿಗೆಳೆದ್ರು ಪ್ರೇಮ್ ಕಹಾನಿ!

ಮೈಸೂರು: ಗಂಡನ ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಹೊರಟಿದ್ದ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿರುವ ಪ್ರಕರಣ ಜಿಲ್ಲೆಯ ಕೆ.ಆರ್ ನಗರದಲ್ಲಿ ವರದಿಯಾಗಿದೆ. ಬಂಧಿತ ಆರೋಪಿಗಳನ್ನ ಶಾರದಾ ಮತ್ತು ಬಾಬು ಎಂದು ಗುರುತಿಸಲಾಗಿದೆ.

ಇದೇ ಜೂನ್​ 22ರಂದು ಟೆಂಪೋ ಟ್ರಾವಲರ್ ಮಾಲೀಕನಾಗಿದ್ದ ಮೃತ ಪತಿ ಕೃಷ್ಣೇಗೌಡನ ಶವ ಕೆ.ಆರ್. ನಗರ ತಾಲ್ಲೂಕಿನ ಚುಂಚನಕಟ್ಟೆ ಮುಖ್ಯ ರಸ್ತೆಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಅಪಘಾತದಂತೆ ಕಂಡುಬಂದಿತ್ತು. ಆದ್ರೆ ತನಿಖೆ ಆರಂಭಿಸಿದ ಪೊಲೀಸರಿಗೆ ಕೃಷ್ಣೇಗೌಡನ ಪತ್ನಿ ಶಾರದಾ ಮೇಲೆ ಅನುಮಾನ ಹುಟ್ಟಿತ್ತು. ಹಾಗಾಗಿ ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಇದು ಕೊಲೆ ಎಂಬುದು ಬಟಾಬಯಲಾಗಿದೆ.

ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ ಮಾಡಿದ ಮಡದಿ!
ತನ್ನ ಪತಿ ಪ್ರತಿನಿತ್ಯ ಕುಡಿದು ಬಂದು ಚಿತ್ರಹಿಂಸೆ ನೀಡುತ್ತಿದ್ದ ಎಂದು ಆರೋಪಿ ಶಾರದಾ ಪೊಲೀಸರಿಗೆ ಹೇಳಿದ್ದಾಳೆ. ಇದರಿಂದ ಬೇಸತ್ತು ಆಕೆಯ
ಪ್ರಿಯಕರ ಬಾಬು ಜೊತೆ ಸೇರಿ ಕೊಲೆ ಮಾಡಿದ್ದಾಳೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.

ಪ್ರಿಯಕರನ ಜೊತೆ ಸೇರಿ, ಪತಿಗೆ ಚೆನ್ನಾಗಿ ಕುಡಿಸಿ ನಂತರ ಕೊಡಲಿಯಿಂದ ಪತಿಯ ತಲೆಗೆ ಹೊಡೆದು ಇಬ್ಬರೂ  ಕೊಲೆ ಮಾಡಿದ್ದರು ಎನ್ನಲಾಗಿದೆ. ನಂತರ ಮೃತದೇಹವನ್ನು ಮುಖ್ಯ ರಸ್ತೆಯಲ್ಲಿ ಇಟ್ಟು ಪಕ್ಕದಲ್ಲಿ ಮೋಟರ್ ಬೈಕ್ ತಂದು ಬೀಳಿಸಿದ್ದ ಆರೋಪಿಗಳು ಕುಡಿದ ಮತ್ತಿನಲ್ಲಿ ಆದ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದರು. ಸದ್ಯಕ್ಕೆ ಆರೋಪಿಗಳನ್ನು ಕೆ.ಆರ್. ನಗರ ಪೊಲೀಸರ ವಶಕ್ಕೆ ಪಡೆದಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more