ಪ್ರೇಮಿ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ: ವರ್ಷಗಳ ಬಳಿಕ ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?

ಮಂಡ್ಯ: ಎರಡೂವರೆ ವರ್ಷಗಳ ಹಿಂದೆ ಅನೈತಿಕ ಸಂಬಂಧಕ್ಕಾಗಿ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ್ದ ಪ್ರಕರಣ ಬಯಲಾಗಿದೆ. ಮದ್ದೂರು ತಾಲೂಕಿನ ಚೆಂದಹಳ್ಳಿ ದೊಡ್ಡಿಯಲ್ಲಿ ಚಾಮರಾಜನಗರದ ಮೂಲದ ರಂಗಸ್ವಾಮಿ(38) ಎಂಬುವರನ್ನು ಕೊಲೆ ಮಾಡಲಾಗಿತ್ತು. ಈ ಸಂಬಂಧ ರಂಗಸ್ವಾಮಿ ಪತ್ನಿ ರೂಪಾ(26) ಹಾಗು ರಾಜೇಗೌಡನದೊಡ್ಡಿಯ ಮುತ್ತುರಾಜುರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಜೋಡಿ:
ಮದ್ದೂರಿನ ಭೀಮನ ಕೆರೆ ಗ್ರಾಮದ ಕಲ್ಲು ಕ್ವಾರಿಯಲ್ಲಿ ಲಾರಿ ಚಾಲನಕಾಗಿ ರಂಗಸ್ವಾಮಿ ಕೆಲಸ ಮಾಡ್ತಿದ್ದ. ಈ ವೇಳೆ ಭೀಮನಕೆರೆಯ ರೂಪಾ ಜೊತೆ ಪರಿಚಯವಾಗಿ ನಂತರ ಪ್ರೀತಿಸಿ ಆಕೆಯನ್ನು ಮದುವೆಯಾಗಿದ್ದ. ನಂತರ ರಾಜೇಗೌಡನದೊಡ್ಡಿಯಲ್ಲಿ ರಂಗಸ್ವಾಮಿ ಮತ್ತು ರೂಪಾ ವಾಸ ಮಾಡುತ್ತಿದ್ದರು. ಈ ವೇಳೆ ಮುತ್ತುರಾಜು ಜೊತೆ ರೂಪಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಷಯ ಪತಿಗೆ ತಿಳಿದ ಕಾರಣ ಪ್ರಿಯಕರನ ಜೊತೆ ಸೇರಿ ಪತ್ನಿಯನ್ನು ಕೊಲೆಗೈದಿದ್ದಾರೆ.

ಕೊಲೆ ಮಾಡಿ ಕೆರೆಯಲ್ಲಿ ಶವ ಹೂತಿಟ್ಟಿದ್ದರು:
ರಂಗಸ್ವಾಮಿಯನ್ನು ಕೊಲೆ ಮಾಡಿದ ಬಳಿಕ ಸಮೀಪದ ಕೆರೆಯಲ್ಲಿ ಶವ ಹೂತಿಟ್ಟು ಮದ್ದೂರಿನಲ್ಲಿ ಜೋಡಿ ವಾಸಮಾಡುತ್ತಿದ್ದರು. ತಾನೇ ಕೊಲೆ ಮಾಡಿ ಪತಿ ನಾಪತ್ತೆಯಾಗಿದ್ದಾನೆಂದು ಮದ್ದೂರು ಪೊಲೀಸ್ ಠಾಣೆಗೆ ರೂಪಾ ದೂರು ನೀಡಿದ್ದರು. ಇತ್ತೀಚೆಗೆ ಮುತ್ತುರಾಜ್ ಮತ್ತು ರೂಪಾ ನಡುವೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು ಶವ ಹೂತಿಟ್ಟ ಜಾಗವನ್ನು ಪತ್ತೆ ಹಚ್ಚಿದ್ದಾರೆ.


Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!