ಅನೈತಿಕ ಸಂಬಂಧಕ್ಕೆ ಯೋಧನನ್ನೇ ಕೊಂದ ಪತ್ನಿ, ಪ್ರಿಯಕರ ಅರೆಸ್ಟ್

ಬೆಳಗಾವಿ: ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯೆಂದು ದೇಶ ಕಾಯುವ ಯೋಧ ಪತಿಯನ್ನೇ ಕೊಂದಿದ್ದ ಪತ್ನಿ, ಆಕೆಯ ಪ್ರಿಯಕರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೊನ್ನಿಹಾಳ ಗ್ರಾಮದ ನಿವಾಸಿ 32 ವರ್ಷದ ದೀಪಕ್ ಪಟ್ಟಣದಾರ ಹತ್ಯೆಗೀಡಾದ ಯೋಧ. ಈತ ನವದೆಹಲಿಯಲ್ಲಿ ಭಾರತೀಯ ಸೇನೆಯಲ್ಲಿ ಸೈನಿಕನಾಗಿದ್ದ. ತನ್ನ ಪತ್ನಿಗೆ ಓಡಾಡಲು ತೊಂದರೆ ಯಾಗಬಾರದು ಎಂದು ಕಾರು ಖರೀದಿ ಮಾಡಿ, ಅದಕ್ಕೆ ಪ್ರಶಾಂತ ಪಾಟೀಲ್ ಎಂಬ ಕಾರು ಚಾಲಕನನ್ನು ನೇಮಿಸಿದ್ದ.

ಆದರೆ ಯೋಧನ ಪತ್ನಿ ಅಂಜಲಿ ಕಾರು ಚಾಲಕನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಪತ್ನಿಯ ಸಂಬಂಧದ ವಿಷಯ ಯೋಧ ದೀಪಕ್​ಗೆ ಗೊತ್ತಾಗಿದೆ. ಹೀಗಾಗಿ ಪತ್ನಿ ಅಂಜಲಿಗೆ ಬುದ್ಧಿವಾದ ಹೇಳಿದ್ದಾನೆ. ಆದ್ರೂ ಅಂಜಲಿ ಮತ್ತು ಪ್ರಶಾಂತ್ ದೀಪಕ್​ನ ಮಾತನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಈ ನಡುವೆ ಪತಿ ದೀಪಕ್ ತವರಿಗೆ ವಾಪಸಾಗುವ ಮಾಹಿತಿ ಅಂಜಲಿ ಹಾಗೂ ಪ್ರಶಾಂತ್​ಗೆ ಗೊತ್ತಾಗಿದೆ. ದೀಪಕ್​ನನ್ನು ಕೊಲ್ಲಲು ಇಬ್ಬರು ಸಂಚು ಹಾಕಿದ್ದಾರೆ.

ಪತಿ ಹತ್ಯೆಗೈದು ಕಾಣೆಯಾಗಿದ್ದಾರೆಂದು ಕಥೆ ಕಟ್ಟಿದ್ದ ಹಂತಕಿ:
ದೀಪಕ್ ಮನೆಗೆ ಹಿಂತಿರುಗುತ್ತಿದ್ದಂತೆ ಜನವರಿ 28ರಂದು ಗೊಡಚನಮಲ್ಕಿಗೆ ಕರೆದೊಯ್ದು ಪ್ರಿಯಕರ, ಮತ್ತಿಬ್ಬರ ಜೊತೆ ಸೇರಿ ಪತಿಯ ಹತ್ಯೆ ಮಾಡಿಸಿದ್ದಾಳೆ. ಕೊಲೆ ಮಾಡಿದ ಬಳಿಕ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದಾರೆ. ಫೆಬ್ರವರಿ 4ರಂದು ಪತ್ನಿ ಅಂಜಲಿ ಪತಿ ಕಾಣೆಯಾಗಿದ್ದಾನೆಂದು ಮಾರಿಹಾಳ ಠಾಣೆಗೆ ದೂರು ನೀಡಿದ್ದಾಳೆ.

ಪೊಲೀಸರು ಪ್ರಕರಣದ ತನಿಖೆ ಕೈಗೊಂಡಾಗ ಅಂಜಲಿ, ಪ್ರಶಾಂತ್ ಅಕ್ರಮ ಸಂಬಂಧ ಬೆಳಕಿಗೆ ಬಂದಿದೆ. ನಂತರ ಆರೋಪಿಗಳನ್ನು ಬಂಧಿಸಿ ಚಿವಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಹಂತಕಿ ಪತ್ನಿ ಅಂಜಲಿ ಮತ್ತು ಪ್ರಿಯಕರ ಪ್ರಶಾಂತ್​ನನ್ನು ಬಂಧಿಸಿದ್ದು, ಮತ್ತಿಬ್ಬರು ಆರೋಪಿಗಳಾದ ನವೀನ್ ಕೆಂಗೇರಿ, ಪ್ರವೀಣ್ ಹುಡೇದ್‌ಗಾಗಿ ಶೋಧ ಕಾರ್ಯ ಮುಂದುವರೆದಿದೆ.

9AM- TV9 Kannada Facebook LIVE ಟಿವಿ9 ಕನ್ನಡ ಫೇಸ್ ಬುಕ್ ಲೈವ್

9AM- TV9 Kannada Facebook LIVE ಟಿವಿ9 ಕನ್ನಡ ಫೇಸ್ ಬುಕ್ ಲೈವ್ ಹೆಂಡ್ತಿ ಅನೈತಿಕ ಸಂಬಂಧಕ್ಕೆ ಯೋಧನ ಹತ್ಯೆ, ಖಾಕಿ ಬಲೆಗೆ ವಂಚಕ ಪತ್ನಿ ಮತ್ತು ಪ್ರಿಯಕರ#TV9Kannada #KannadaNews #FBLive #FacebookLive

Tv9Kannada यांनी वर पोस्ट केले शनिवार, २२ फेब्रुवारी, २०२०

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!