ಇವತ್ತು ರೈಡರ್ಸ್ ಮತ್ತು ರೈಸರ್ಸ್ ನಡುವೆ ಮುಕಾಬಲಾ

ಇಂಡಿಯನ್ ಪ್ರಿಮೀಯರ್ ಲೀಗ್-13 ಇಂದು ಎರಡನೆ ವಾರಕ್ಕೆ ಕಾಲಿಟ್ಟಿದೆ. ಕೊಲ್ಕತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವೆ ಈ ಆವೃತಿಯ ಎಂಟನೇ ಪಂದ್ಯ ಅಬು ಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ. ಕುತೂಹಲಕಾರಿ ವಿಷಯವೆಂದರೆ, ಟೂರ್ನಿ ಶುರುವಾಗಿ ವಾರ ಕಳೆದರೂ ಇವತ್ತು ಸೆಣಸಲಿರುವ ಟೀಮುಗಳು ಇದುವರೆಗೆ ಜಯ ದಾಖಲಿಸಿಲ್ಲ. ಹಾಗಾಗಿ ಜಯಕ್ಕಾಗಿ ಅವು ಎಕ್ಸ್​ಟ್ರಾ ಎಫರ್ಟ್ ಹಾಕುವುದು ನಿಶ್ಚಿತ.

ಟಾಸ್ ಗೆದ್ದರೆ ಪಂದ್ಯ ಗೆದ್ದಂತೆಯೇ ಎಂಬ ಇದುವರೆಗಿನ ನಂಬಿಕೆ ಹುಸಿ ಹೋಗುತ್ತಿದೆ. ಟಾಸ್ ಗೆದ್ದ ಟೀಮುಗಳೆಲ್ಲ ಮೊದಲು ಫೀಲ್ಡ್ ಮಾಡುವ ನಿರ್ಧಾರ ಬ್ಯಾಕ್​ಫೈರ್ ಆಗುತ್ತಿದೆ. ಇಲ್ಲಿಯವರೆಗೆ ಆಡಿರುವ 7 ಪಂದ್ಯಗಳಲ್ಲಿ ಒಮ್ಮೆ ಮಾತ್ರ ಟಾರ್ಗೆಟ್ ಚೇಸ್ ಮಾಡಿರುವ ಟೀಮು ಗೆಲುವು ಸಾಧಿಸಿದೆ. ಸಿನಿಮಾ ನಟ ಶಾರುಖ್ ಖಾನ್​ನ ಕೊಲ್ಕತಾ, ಮೊದಲ ಪಂದ್ಯದಲ್ಲಿ ನಾಲ್ಕು ಬಾರಿ ಚಾಂಪಿಯನ್​ಶಿಪ್ ಗೆದ್ದಿರುವ ಮುಂಬೈ ಇಂಡಿಯನ್ಸ್​ಗೆ ಸುಲಭವಾಗಿ ಸೋತಿತು. ಹಾಗೆಯೇ, ಹೈದರಾಬಾದ್, ದಕ್ಷಿಣ ಭಾರತದ ಮತ್ತೊಂದು ಟೀಮ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 10 ರನ್​ಗಳಿಂದ ಪರಾಭವಗೊಂಡಿತ್ತು.

ಇದನ್ನೂ ಓದಿ: IPL 2020: SRH vs KKR Live Score 

ಕೊಲ್ಕತಾದ ಬ್ಯಾಟಿಂಗ್ ಸಶಕ್ತವಾಗಿದೆಯಾದರೂ ಮೊದಲ ಪಂದ್ಯದಲ್ಲಿ ಅದು ಮುಗ್ಗುರಿಸಿತು. ಕೇವಲ ನಾಯಕ ದಿನೇಶ್ ಕಾರ್ತೀಕ್(30) ಮತ್ತಯ ನಿತಿಶ್ ರಾಣಾ (24) ರನ್ ಗಳಿಸಿದರು. ಆ ಪಂದ್ಯದಲ್ಲಿ ಅತಿಹೆಚ್ಚು ರನ್ ಗಳಿಸಿದ್ದು ಅತ್ಯಂತ ದುಬಾರಿ ವಿದೇಶಿ ಆಟಗಾರ ಪ್ಯಾಟ್ ಕಮ್ಮಿನ್ಸ್. ಅವರನ್ನು ಟೀಮು ಖರೀದಿಸಿದ್ದು ಬೌಲ್ ಮಾಡಲು, ಮತ್ತು ಎದುರಾಳಿ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕಲು. ಆದರೆ ಈ ಮಹಾಶಯು ತಾವೆಸದ 3 ಒವರ್​ಗಳಲ್ಲಿ 49 ರನ್ ನೀಡಿದರು. ರೋಹಿತ್ ಶರ್ಮ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಚೆನ್ನಾಗಿ ದಂಡಿಸಿದರು. ಇತರ ವಿದೇಶಿ ಆಟಗಾರರಾದ ಅಯಾನ್ ಮೊರ್ಗನ್, ಆಂದ್ರೆ ರಸೆಲ್ ಅವರಿಂದ ಫೈರ್​ವರ್ಕ್ಸ್ ನಿರೀಕ್ಷಿಸಲಾಗಿತ್ತು, ಅದರೆ ಇಬ್ಬರೂ ವಿಫಲರಾದರು.

ಯುವ ಪ್ರತಿಭಾವಂತ ಮತ್ತು ಇತ್ತೀಚಿನ ದಿನಗಳಲ್ಲಿ ಬೇರೆ ಕಾರಣಗಳಿಗೆ ಸುದ್ದಿಯಲ್ಲಿರುವ ಶುಭ್​ಮನ್ ಗಿಲ್ ಹಾಗೂ ಅವರ ಜೊತೆಗಾರ ಸುನಿಲ್ ನರೈನ್ ಸಹ ಮೊದಲ ಪಂದ್ಯದಲ್ಲಿ ನಿರಾಶೆಗೊಳಿಸಿದರು. ಈ ಫಾರ್ಮಾಟ್​ನಲ್ಲಿ ಹೆಚ್ಚು ಎಸೆತಗಳನ್ನಾಡುವ ಅವಕಾಶ ಟಾಪ್ ಆರ್ಡರ್ ಬ್ಯಾಟ್ಸ್​ಮನ್​ಗಳಿಗಿರುತ್ತದೆ. ಹಾಗಾಗಿ ನಿರೀಕ್ಷೆಯೂ ಅವರ ಮೇಲೆ ಜಾಸ್ತಿ. ನಾವು ಫೇಲಾದರೇನಾಯಿತು, ಕೆಳ ಕ್ರಮಾಂಕದಲ್ಲಿ ರಸೆಲ್ ಇದ್ದಾನಲ್ಲ ಅಂದುಕೊಂಡು ಯಾಮಾರಿದರೆ, ಅದು ತಂಡಕ್ಕೆ ದುಬಾರಿಯಾಗುವ ಸಾಧ್ಯತೆಯೇ ಹೆಚ್ಚು. ನರೈನ್ ಗಳಿಸುವ ರನ್​ಗಳನ್ನು ಬೋನಸ್ ಅಂತ ಪರಿಗಣಿಸಲಾಗುತ್ತದೆ, ಅದು ಕಾಂಟ್ರಿಬ್ಯೂಷನ್ ಅಲ್ಲ.

ಕಮ್ಮಿನ್ಸ್ ಮೇಲೆ ಖಂಡಿತವಾಗಿಯೂ ಒತ್ತಡವಿದೆ. ಅತ್ಯಂತ ದುಬಾರಿ ಆಟಗಾರನ ಪಟ್ಟದೊಂದಿಗೆ ಮೈದಾನಕ್ಕಿಳಿಯುವಾಗ ಪರ್ಫಾಮ್ ಮಾಡಲೇಬೇಕೆನ್ನುವ ತುಡಿತ ಅವರನ್ನು ಒತ್ತಡಕ್ಕೆ ನೂಕುತ್ತದೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಟಗಾರರಿಗೆ ಇಂಥ ಒತ್ತಡ ಸಾಮಾನ್ಯ. ಇವತ್ತ್ತು ಕಮ್ಮಿನ್ಸ್ ಮೊದಲ ಪಂದ್ಯದಲ್ಲಿನ ವೈಫಲ್ಯತೆಯನ್ನು ಮರೆಸುವ ಪ್ರದರ್ಶನ ನೀಡಬಹುದು. ಅವರೊಂದಿಗೆ ಆಕ್ರಮಣದಲ್ಲಿ ಭಾಗಿಯಾದ ಸಂದೀಪ್ ವಾರಿಯರ್ ಮತ್ತು ಶಿವಮ್ ಮಾವಿ ಉತ್ತಮ ದಾಳಿ ನಡೆಸಿದರು. ರಸೆಲ್, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಲಿ ಅಂತ ಟೀಮ್ ಮ್ಯಾನೇಜ್​ಮೆಂಟ್ ನಿರೀಕ್ಷೆಯಿಟ್ಟುಕೊಂಡಿದೆ.

ಯುವ ಪ್ರತಿಭಾವಂತ ಮತ್ತು ಇತ್ತೀಚಿನ ದಿನಗಳಲ್ಲಿ ಬೇರೆ ಕಾರಣಗಳಿಗೆ ಸುದ್ದಿಯಲ್ಲಿರುವ ಶುಭ್​ಮನ್ ಗಿಲ್ ಹಾಗೂ ಅವರ ಜೊತೆಗಾರ ಸುನಿಲ್ ನರೈನ್ ಸಹ ಮೊದಲ ಪಂದ್ಯದಲ್ಲಿ ನಿರಾಶೆಗೊಳಿಸಿದರು. ಈ ಫಾರ್ಮಾಟ್​ನಲ್ಲಿ ಹೆಚ್ಚಯ ಎಸೆತಗಳನ್ನಾಡುವ ಅವಕಾಶ ಟಾಪ್ ಆರ್ಡರ್ ಬ್ಯಾಟ್ಸ್​ಮನ್​ಗಳಿಗಿರುತ್ತದೆ. ಹಾಗಾಗಿ ನಿರೀಕ್ಷೆಯೂ ಅವರ ಮೇಲೆ ಜಾಸ್ತಿಯರುತ್ತದೆ. ನಾವು ಫೇಲಾದರೇನಾಯಿತು, ಕೆಳ ಕ್ರಮಾಂಕದಲ್ಲಿ ರಸೆಲ್ ಇದ್ದಾನಲ್ಲ ಅಂದುಕೊಂಡು ಯಾಮಾರಿದರೆ, ಅದು ತಂಡಕ್ಕೆ ದುಬಾರಿಯಾಗುವ ಸಾಧ್ಯತೆಯೇ ಹೆಚ್ಚು. ನರೈನ್ ಗಳಿಸುವ ರನ್​ಗಳನ್ನು ಬೋನಸ್ ಅಂತ ಪರಿಗಣಿಸಲಾಗುತ್ತದೆ, ಅದು ಕಾಂಟ್ರಿಬ್ಯೂಷನ್ ಅಲ್ಲ. ನರೈನ್ ಮತ್ತು ಚೈನಾಮನ್ ಬೌಲರ್ ಕುಲ್ದೀಪ್ ಯಾದವ್ ಅವರಿಂದ ಸುಧಾರಿತ ಪ್ರದರ್ಶನಗಳು ಬರುವ ನಿರೀಕ್ಷೆ ಇಟ್ಟಕೊಳ್ಳಲಾಗಿದೆ

ಅತ್ತ, ಹೈದರಾಬಾದ್​ಗೂ ಕೆಲ ಸಮಸ್ಯೆಗಳಿವೆ. ನಾಯಕ ಡೇವಿಡ್ ವಾರ್ನರ್ ಬೆಂಗಳೂರು ವಿರುದ್ಧ ಆಡಿದ ಪಂದ್ಯದಲ್ಲಿ ದುರದೃಷ್ಟಕರ ರೀತಿಯಲ್ಲಿ ರನೌಟ್ ಆದರು. ಆ ನಿರಾಸೆಯನ್ನು ಅವರು ಇಂದು ದೂರಮಾಡಿಕೊಳ್ಳಬಹುದು. ಮತ್ತೊಬ್ಬ ಓಪನರ್ ಜಾನಿ ಬೇರ್​ಸ್ಟೋ ಅರ್ಧಶತಕ ಬಾರಿಸಿ ತಾನು ಉತ್ತಮ ಸ್ಪರ್ಶದಲ್ಲಿರುವುದನ್ನು ತೋರಿಸಿದ್ದಾರೆ. ಮನೀಶ್ ಪಾಂಡೆ ಸಹ ಬೆಂಗಳೂರು ವಿರುದ್ಧ ಚೆನ್ನಾಗಿ ಆಡಿದರು. ಮಧ್ಯಮ ಕ್ರಮಾಂಕದಲ್ಲಿ ಆಡಿದ, ಪ್ರಿಯಮ್ ಗಾರ್ಗ್, ಅಭೀಷೇಕ್ ಶರ್ಮ, ಮತ್ತು ವಿಜಯ ಶಂಕರ್ ರನ್ ಸ್ಕೋರ್ ಮಾಡಲಿಲ್ಲ. ಸ್ಟಾರ್ ಬ್ಯಾಟ್ಸ್​ಮನ್ ಕೇನ್ ವಿಲಿಯಮ್ಸನ್ ಇನ್ನೂ ಮ್ಯಾಚ್ ಫಿಟ್ ಆಗಿಲ್ಲದಿರುದವುದು ಟೀಮಿನ ಮೆಂಟರ್ ವಿವಿಎಸ್ ಲಕ್ಷಣ್ ಅವರಿಗೆ ಚಿಂತೆಯುಂಟು ಮಾಡಿದೆ. ಅಲ್ಲದೆ ಗಾಯಗೊಂಡಿರುವ ಆಲ್​ರೌಂಡರ್ ಮಿಚೆಲ್ ಮಾರ್ಷ್ ಹೆಚ್ಚು ಕಡಿಮೆ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ವೆಸ್ಟ್ ಇಂಡೀಸ್​ನ ಜೇಸನ್ ಹೋಲ್ಡರ್ ಅವರನ್ನು ತರಲಾಗಿದೆ. ಅದರೆ ಜೇಸನ್ ಇನ್ನೂ 2-3 ಪಂದ್ಯಗಳನ್ನು ಆಡುವಂತಿಲ್ಲ. ಹಾಗಾಗಿ, ಅಫ್ಘಾನಿಸ್ತಾನದ ಆಲ್​ರೌಂಡರ್ ಮೊಹ್ಮದ್ ನಬಿ ಇಂದಿನ ಪಂದ್ಯ ಆಡಬಹುದು.

ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಸಂದೀಪ್ ಶರ್ಮ, ವಿಜಯ್ ಶಂಕರ್ ವೇಗ ಮತ್ತು ರಶೀದ್ ಖಾನ್, ನಟರಾಜನ್ ಸ್ಪಿನ್ ದಾಳಿಯನ್ನು ನಿಭಾಯಿಸಲಿದ್ದಾರೆ. ಖಾನ್ ಅವರ ಮೇಲೆ ಹೈದರಾಬಾದ್ ಜಾಸ್ತಿ ನಂಬಿಕೆಯಿಟ್ಟುಕೊಡಿದೆ, ಹಾಗಾಗಿ ಇವತ್ತು ಅವರು ಪರ್ಫಾರ್ಮ್ ಮಾಡಲೇಬೇಕಿದೆ.

 

Related Tags:

Related Posts :

Category:

error: Content is protected !!