ಹೆರಿಗೆ ವೇಳೆ.. ಹೊಟ್ಟೆಯಲ್ಲಿ ವೈದ್ಯರು ಡ್ರೆಸ್ಸಿಂಗ್​ ಬಟ್ಟೆ ಬಿಟ್ಟಿದ್ದಾರೆಂದು ಆರೋಪಿಸಿದ ಮಹಿಳೆ..; ಆದ್ರೆ ನಿಜಕ್ಕೂ ಎಲ್ಲಿತ್ತು ಗೊತ್ತಾ?

ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೋರ್ವರು, ವೈದ್ಯರು ಡ್ರೆಸ್ಸಿಂಗ್​ ಬಟ್ಟೆಯನ್ನು ನನ್ನ ಹೊಟ್ಟೆಯಲ್ಲೇ ಬಿಟ್ಟಿದ್ದಾರೆ ಎಂದು ಮುದ್ದೇಬಿಹಾಳ ತಾಲೂಕು ಆಸ್ಪತ್ರೆ ವೈದ್ಯರ ವಿರುದ್ಧ ಆರೋಪ ಮಾಡಿದ್ದಾರೆ.

  • Lakshmi Hegde
  • Published On - 17:58 PM, 25 Nov 2020

ವಿಜಯಪುರ: ಹೆರಿಗೆ ಮಾಡಿಸಿದ ವೈದ್ಯರು ಡ್ರೆಸ್ಸಿಂಗ್​ ಬಟ್ಟೆಯನ್ನು ನನ್ನ ಹೊಟ್ಟೆಯಲ್ಲೇ ಬಿಟ್ಟಿದ್ದಾರೆ ಎಂದು ಮಹಿಳೆಯೋರ್ವರು ಮುದ್ದೇಬಿಹಾಳ ತಾಲೂಕು ಆಸ್ಪತ್ರೆ ವೈದ್ಯರ ವಿರುದ್ಧ ಆರೋಪ ಮಾಡಿದ್ದಾರೆ.

ಮುದ್ದೇಬಿಹಾಳ ಪಟ್ಟಣ ನಿವಾಸಿ ಶಾಹೀನ್​ ಉತ್ನಾಳ್​ ಎಂಬ ಮಹಿಳೆ ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆ ಸೇರಿದ್ದರು. ನನಗೆ ಹೊಟ್ಟೆ ನೋವು ಬರಲು ಒಳಗಿರುವ ಬಟ್ಟೆಯೇ ಕಾರಣ. ಆರು ತಿಂಗಳ ಹಿಂದೆ ನನಗೆ ಹೆರಿಗೆ ಮಾಡಿಸಿದ ವೈದ್ಯರು ಡ್ರೆಸ್ಸಿಂಗ್​ ಬಟ್ಟೆಯನ್ನು ಅಲ್ಲಿಯೇ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಆಕೆಯ ಕುಟುಂಬಸ್ಥರೂ ಇದೇ ಆರೋಪ ಮಾಡಿದ್ದಾರೆ.

ಜನನಾಂಗದಲ್ಲಿತ್ತು ಬಟ್ಟೆ !
ಹೊಟ್ಟೆನೋವಿನಿಂದ ದಾಖಲಾದ ಮಹಿಳೆಯನ್ನು ಪರಿಶೀಲಿಸಿದ ವೈದ್ಯರು ಜನನಾಂಗದಿಂದ ಬಟ್ಟೆ ತೆಗೆದಿದ್ದಾರೆ. ನಂತರ ಮಾಹಿತಿ ನೀಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅನಿಲ್​ ಕುಮಾರ್​ ಶೇಗುಣಸಿ, ಶಾಹೀನ್​ಗೆ ಸಹಜ ಹೆರಿಗೆಯಾಗಿದೆ. ಆಕೆಯ ಹೊಟ್ಟೆಯಲ್ಲಿ ಯಾವ ಬಟ್ಟೆಯೂ ಇರಲಿಲ್ಲ. ಜನನಾಂಗದಲ್ಲಿ ಇತ್ತು. ಅದನ್ನು ಹೊರಗೆ ತೆಗೆಯಲಾಗಿದೆ. ಈ ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ತಜ್ಞ ವೈದ್ಯರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಮುದ್ದೇಬಿಹಾಳ ಆಸ್ಪತ್ರೆ