ಮನೆ ಮುಂದೆ ಆಟವಾಡ್ತಿದ್ದ ಬಾಲಕನಿಗೆ ದೋಸೆ ಎತ್ತುವ ಮೊಗಚೆ ಕೈನಿಂದ ಬರೆ

  • KUSHAL V
  • Published On - 13:41 PM, 18 Nov 2020

ಬೆಂಗಳೂರು: ಮನೆಯ ಮುಂದೆ ಆಟವಾಡುವ ವೇಳೆ ಗಲಾಟೆ ಮಾಡಿದ ಬಾಲಕನೊಬ್ಬನಿಗೆ ನೆರೆಮನೆಯ ಮಹಿಳೆ ಬರೆ ಎಳೆದಿರುವ ಘಟನೆ ಹೆಸರಘಟ್ಟದಲ್ಲಿ ನಡೆದಿದೆ. ಬಾಲಕನ ಮುಖದ ಮೇಲೆ ಆರೋಪಿ ವೆಂಕಟಮ್ಮ ದೋಸೆ ಎತ್ತುವ ಮೊಗಚೆ ಕೈ ಬರೆ ಹಾಕಿದ್ದಾಳೆ ಎಂದು ತಿಳಿದುಬಂದಿದೆ.

ಘಟನೆಯಿಂದ ರಮೇಶ್-ರಾಧಾ ದಂಪತಿಯ ಮಗ 6 ವರ್ಷದ ಚಂದನ್‌ಗೆ ಗಾಯವಾಗಿದೆ. ತನ್ನ ಮಗನಿಗೆ ಬರೆ ಹಾಕಿದ ವೆಂಕಟಮ್ಮನನ್ನು ಈ ಬಗ್ಗೆ ಪ್ರಶ್ನಿಸಿದ ದಂಪತಿಯ ಜೊತೆ ಆರೋಪಿ ಗಲಾಟೆ ಸಹ ನಡೆಸಿದ್ದಾಳೆ ಎಂದು ತಿಳಿದುಬಂದಿದೆ.

ಚಂದನ್ ಸೇರಿದಂತೆ ಹಲವು ಮಕ್ಕಳು ಮನೆ ಬಳಿ ಆಟವಾಡ್ತಿದ್ದರು. ಮಕ್ಕಳು ಆಟದ ವೇಳೆ ಕಿರುಚಾಟ ನಡೆಸಿದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ವೆಂಕಟಮ್ಮ ಬಾಲಕನ ಮುಖದ ಮೇಲೆ ಬರೆ ಎಳೆದಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.