ಮಕ್ಕಳಾಗಲ್ಲ ಎಂದು ಜ್ಯೋತಿಷಿ ಹೇಳಿದ್ದಕ್ಕೆ ಕಿರುಕುಳ? ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

  • KUSHAL V
  • Published On - 17:32 PM, 14 Nov 2020

ಬೆಂಗಳೂರು: ನಗರದ ಹೊರಮಾವು ಪ್ರದೇಶದ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬರ ಶವ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಕ್ಕಳಾಗಲ್ಲವೆಂದು ಜ್ಯೋತಿಷಿ ಹೇಳಿದ್ದಕ್ಕೆ 25 ವರ್ಷದ ಅಶ್ವಿನಿ ಎಂಬುವವರಿಗೆ ಆಕೆಯ ಪತಿ ಹಾಗೂ ಮನೆಯವರು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಇವರ ಕಿರುಕುಳದಿಂದ ಬೇಸತ್ತು ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಅಶ್ವಿನಿ ಕಳೆದ ಫೆಬ್ರವರಿಯಲ್ಲಿ ಯುವರಾಜ್ ಎಂಬುವವನ ಜೊತೆ ಮದುವೆಯಾಗಿದ್ದರು. ವಿವಾಹದ ಬಳಿಕ ಯುವರಾಜ್ ಪೋಷಕರು ಜ್ಯೋತಿಷಿ ಬಳಿ ಅಶ್ವಿನಿ ಜಾತಕ ತೋರಿಸಿದ್ದರಂತೆ. ಆಗ, ಅಶ್ವಿನಿಗೆ ಮಕ್ಕಳಾಗಲ್ಲ ಎಂದು ಜ್ಯೋತಿಷಿ ಹೇಳಿದ್ದನಂತೆ. ಈ ವಿಚಾರ ತಿಳಿದ ಯುವರಾಜ್​ ಹಾಗೂ ಆತನ ಕುಟುಂಬದವರು ಅಶ್ವಿನಿಗೆ ಪ್ರತಿದಿನ ಕಿರುಕುಳ ಕೊಡ್ತಿದ್ರಂತೆ.

ಜೊತೆಗೆ, ಅಶ್ವಿನಿಯಿಂದ ದೂರವಾಗಲು‌ ಆಕೆಯ ಪತಿ ಮನೆಯವರು ವರದಕ್ಷಿಣೆಗೆ ಕಿರುಕುಳ ಸಹ ಕೊಡುತ್ತಿದ್ದರು ಎಂದು ಆರೋಪಿಸಲಾಗಿದೆ. ಕಾರು, ಚಿನ್ನಾಭರಣ ಮತ್ತು ನಗದು ನೀಡುವಂತೆ ಅಶ್ವಿನಿಗೆ ಕಿರುಕುಳ ಕೊಡ್ತಿದ್ದರಂತೆ. ಈ ವಿಚಾರವಾಗಿ, ನಿನ್ನೆ ಕೂಡ ದಂಪತಿ ನಡುವೆ ಜಗಳ ನಡೆದಿತ್ತು ಎಂದು ಹೇಳಲಾಗಿದೆ.

ಇದೀಗ, ಇಂದು ಬೆಳಗ್ಗೆ ಅಶ್ವಿನಿ ಮೃತದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸದ್ಯ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.