ಪಕ್ಕದ ಮನೆ ಮಗುವನ್ನು ಬಕೆಟ್​ ನೀರಲ್ಲಿ ಮುಳುಗಿಸಿ ಸಾಯಿಸಿದಳು, ಯಾಕೆ?

ಮುಂಬಯಿ: ನೆರೆಹೊರೆ ಅಂದ ಮೇಲೆ ನಾಲ್ಕು ಮಾತು ಬರುತ್ತೆ ಹೋಗುತ್ತೆ. ಹಾಗಂತ ಕೊಲೆಯನ್ನೇ ಮಾಡೋಕಾಗುತ್ತಾ? ಆದ್ರೆ ಇಂಥ ನೀಚ ಕೆಲಸ ಮಾಡಿದ್ದಾಳೆ ಮುಂಬೈನ ಮಹಿಳೆಯೊಬ್ಬಳು.

ಹೌದು ಮುಂಬೈ ಮಹಾನಗರದ ಅಂಧೇರಿಯಲ್ಲಿನ ಸಂತೋಷಿ ಮಾತಾ ನಗರದಲ್ಲಿ ಸೋಮವಾರ ಈ ಘಟನೆ ಸಂಭವಿಸಿದೆ. ಸಂತೋಷಿನಗರದ ಅಕ್ಕಪಕ್ಕದ ಮನೆಯ ಇಬ್ಬರು ಮಹಿಳೆಯರು ಆಗಾಗ ಕ್ಷುಲ್ಲಕ ಕಾರಣಕ್ಕಾಗಿ ಕಿತ್ತಾಡಿಕೊಳ್ತಿದ್ದರು.

ಆದ್ರೆ ಇತ್ತೀಚೆಗೆ ನಡೆದ ಕೋಳಿ ಜಗಳ ಸ್ವಲ್ಪ ಸಿರಿಯಸ್ಸಾಗಿದೆ. ಹೀಗಾಗಿ ಸೇಡು ತೀರಿಸಿಕೊಳ್ಳಲು ಮುಂದಾದ ಆರೋಪಿ, ನೆರೆ ಮನೆಯ ನಾಲ್ಕು ವರ್ಷದ ಮಗುವನ್ನ ಮನೆಗೆ ಕರೆದು ಕುತ್ತಿಗೆ ಹಿಚುಕಿ ಸಾಯಿಸಿದ್ದಾಳೆ. ನಂತರ ಮಗುವಿನ ತಲೆಯನ್ನು ತನ್ನ ಮನೆಯ ಬಾತ್‌ರೂಮ್‌ನಲ್ಲಿರುವ ಬಕೆಟ್‌ನಲ್ಲಿ ಮುಳುಗಿಸಿಟ್ಟಿದ್ದಾಳೆ.

ಆದ್ರೆ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನ ಬಂಧಿಸಿದ್ದಾರೆ. ಐಪಿಸಿ ಸೆಕ್ಸನ್‌ 302ರಡಿ ಕೊಲೆ ಪ್ರಕರಣ ದಾಖಲಿಸಿ ಕಂಬಿ ಹಿಂದೆ ಕಳಿಸಿದ್ದಾರೆ.

Related Tags:

Related Posts :

Category:

error: Content is protected !!