ಮಾಯಾಂಗನೆಯ ಮೆಸೇಜ್​ಗೆ ಮಾರು ಹೋದವನು ಕಳಕೊಂಡ ಹಣವೆಷ್ಟು ಗೊತ್ತಾ?

ಮಹಾ ವಂಚಕಿಯೊಬ್ಬಳು 60 ವರ್ಷದ ವ್ಯಕ್ತಿಯನ್ನು ಯಾಮಾರಿಸಿದ್ದಾಳೆ. ಅದೂ ತಾಮು ಅಮೆರಿಕ ಸೈನ್ಯದ ಭಯೋತ್ಪಾದನಾ ವಿರೋಧಿ ವಿಭಾಗದ ಅಧಿಕಾರಿಯೆಂದು ನಂಬಿಸಿ. ಈ ಬಾಬತ್ತಿನಲ್ಲಿ ಬರೋಬ್ಬರಿ 1.24 ಕೋಟಿ ರೂಗಳನ್ನು ಮಹಿಳೆ ವಂಚಿಸಿರುವ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ!

ಚಕ್ಕರ್‌ಪುರ ಗ್ರಾಮದ ಮಾರುತಿ ವಿಹಾರ್​ನ ನಿವಾಸಿಯಾಗಿರುವ ಧೀರೇಂದ್ರ ಕುಮಾರ್ ಮೋಸ ಹೋಗಿರುವ ವ್ಯಕ್ತಿ. ತಾನು US Army ಭಯೋತ್ಪಾದನಾ ನಿಗ್ರಹ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಮಹಿಳೆ ಧಿರೇಂದ್ರ ಕುಮಾರ್​ನನ್ನು ಪರಿಚಯ ಮಾಡಿಕೊಂಡಿದ್ದಾಳೆ.

ಭಾರತದಲ್ಲಿ ಔಷಧ ಕಂಪನಿಯನ್ನು ತೆರೆಯಲು ಬಯಸಿರುವುದಾಗಿ ಮಹಿಳೆ ಧೀರೇಂದ್ರ ಕುಮಾರ್ ಬಳಿ ಹೇಳಿದ್ದಾಳೆ. ಜೊತೆಗೆ ಕಂಪನಿ ತೆರೆಯಲು ಸುಮಾರು 7.8 ಮಿಲಿಯನ್ ಡಾಲರ್​ಗಳನ್ನು ನನಗೆ ಕಳುಹಿಸುವುದಾಗಿ ಹೇಳಿದ್ದಳು ಎಂದು ಧಿರೇಂದ್ರ ಕುಮಾರ್ ತಿಳಿಸಿದ್ದಾರೆ.

ನಂತರ, ಜೂನ್ 19 ರಿಂದ ಜುಲೈ 17 ರವರೆಗೆ ಕಸ್ಟಮ್ಸ್ ಅಧಿಕಾರಿಯೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಧಿರೇಂದ್ರ ಕುಮಾರ್​ಗೆ ಕರೆ ಮಾಡಿ ನಾನು ಅಮೆರಿಕದಿಂದ ಪಾರ್ಸಲ್ ಬಾಕ್ಸ್​ ಒಂದನ್ನು ಪಡೆದುಕೊಂಡಿದ್ದೇನೆ ಮತ್ತು ಅದನ್ನು ಪಡೆಯಲು ನೀವು ಹಣವನ್ನು ಠೇವಣಿ ಇಡಬೇಕು ಎಂದು ಹೇಳಿದ್ದಾನೆ.

ತಾನು ಮೋಸ ಹೋಗುತ್ತಿರುವುದನ್ನು ಅರಿಯದ ಧಿರೇಂದ್ರ ಕುಮಾರ್ ನಂತರ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಅಷ್ಟೂ ಹಣವನ್ನು ಜಮಾ ಮಾಡಿದ್ದಾರೆ. ಹಣ ತಲುಪಿದ ನಂತರ ಸಂಬಂಧಪಟ್ಟವರಿಂದ ಯಾವುದೆ ಕರೆ ಬಾರದಿದ್ದಾಗ ಧೀರೇಂದ್ರ ಕುಮಾರ್​ಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Tags:

Related Posts :

Category: