ಸತ್ತೇ ಹೋಗಿದ್ದಾರೆ ಎಂದುಕೊಂಡ ಮಹಿಳೆ ಎಲ್ಲರ ಮುಂದೆಯೇ ಕಣ್ಣು ಬಿಟ್ಟಾಗ!

ಬೆಳಗಾವಿ: ಮುಚ್ಚಂಡಿ ಗ್ರಾಮದಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ಸತ್ತೆ ಹೋದ್ರು ಎನ್ನಲಾಗ್ತಿದ್ದ ಮಹಿಳೆ ಸಡನ್ ಆಗಿ ಎಲ್ಲರ ಕಣ್ಮುಂದೆಯೇ ಎದ್ದು ನಿಂತಿದ್ದಾರೆ. ಇದು ಪವಾಡವೇ ಅಂತಾ ಎಲ್ಲರೂ ಶಾಕ್ ಆಗಿದ್ದಾರೆ.

ಮಾಲಾ ಯಲ್ಲಪ್ಪ ಚೌಗುಲೆ ಎಂಬುವರು ಅನಾರೋಗ್ಯದಿಂದ ಐಸಿಯು ಸೇರಿದ್ರು. ಕುಟುಂಬಸ್ಥರು ಮಾಲಾರನ್ನ ಉಳಿಸಿಕೊಳ್ಳಲು ಪರದಾಡ್ತಿದ್ರು. ಆದ್ರೆ, ಚಿಕಿತ್ಸೆ ಫಲಕಾರಿ ಆಗಿರಲಿಲ್ವಂತೆ. ವೈದ್ಯರ ಪ್ರಯತ್ನವೆಲ್ಲಾ ವಿಫಲವಾಗಿ, ಮಾಲಾ ಸಾವಿನ ಮನೆ ಸೇರಿದ್ರಂತೆ. ಇದ್ರಿಂದ ಕುಟುಂಬಸ್ಥರು ತಮ್ಮ ಬಂದು-ಬಳಗಕ್ಕೂ ಸಾವಿನ ಸುದ್ದಿ ತಿಳಿಸಿದ್ರು. ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೋಗಿದ್ದ ಸಂಬಂಧಿಗಳು ವಾಪಸ್ ಬಂದಿದ್ರು. ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ರು. ಆದ್ರೆ, ಪೂಜೆ ಬಳಿಕ ಬಾಯಿಗೆ ಗಂಗಾಜಲ ಬಿಟ್ಟಿದ್ದೇ ತಡ ಮಾಲಾ ದಿಢೀರ್ ಅಂತ ಕಣ್ಬಿಟ್ಟು ಎದ್ದು ಕುಳಿತಿದ್ರಂತೆ.

ಇನ್ನು, ಇಡೀ ಮನೆಯಲ್ಲಿ ಕಾರ್ಮೋಡದ ಕರಿಛಾಯೆ ಆವರಿಸಿತ್ತು. ಕುಟುಂಬಸ್ಥರ ಮುಖ ಬಾಡಿ ಹೋಗಿತ್ತು. ಗ್ರಾಮಸ್ಥರಂತೂ ಅಂತ್ಯಕ್ರಿಯೆಗೆ ಆಗಮಿಸಿ ಮೌನಕ್ಕೆ ಜಾರಿದ್ರು. ಆದ್ರೆ, ಯಾವಾಗ ಮಾಲಾ ಸತ್ತು ಬದುಕಿದ್ದಾರೆ ಅಂತಾ ಗೊತ್ತಾಯ್ತೋ ಎಲ್ರು ಆಚ್ಚರಿಗೊಂಡಿದ್ರು. ತಕ್ಷಣವೇ ಮಾಲಾರನ್ನ ಕೊಠಡಿಗೆ ಎತ್ಕೊಂಡೋಗಿ ಆರೈಕೆ ಮಾಡಿದ್ರು. ಒಟ್ನಲ್ಲಿ, ಇದು ಕುಟುಂಬಸ್ಥರ ಅವಸರವೋ. ದೇವರ ಪವಾಡವೋ ಅಥವಾ ವೈದ್ಯ ಲೋಕಕ್ಕೆ ಸವಾಲೋ ಗೊತ್ತಿಲ್ಲ. ಆದ್ರೆ, ಸತ್ತೇ ಹೋಗಿದ್ರು ಎನ್ನಲಾಗ್ತಿದ್ದ ಮಹಿಳೆ ಜೀವಂತವಾಗಿದ್ದಾಳೆ. ಊರಿನ ಜನ ಅಚ್ಚರಿಗೊಂಡಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!