ಶವ ಬೇಕು ಅಂದರೆ 4 ಲಕ್ಷ ಬಿಲ್ ಕಟ್ಟಬೇಕಂತೆ, ತಾಯಿ ಶವ ಪಡೆಯಲು ಮಗನ ಕಣ್ಣೀರು.

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೂ ಖಾಸಗಿ ಆಸ್ಪತ್ರೆಗಳ ಅಮಾನವೀಯ ವರ್ತನೆ ಮುಂದುವರೆದಿದ್ದು, ಮೃತ ತಾಯಿಯ ಶವ ಪಡೆಯಲು ಆಸ್ಪತ್ರೆ ಮುಂದೆ ಮಗ ಕಣ್ಣೀರಿಡುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಳೆದ ತಿಂಗಳು ಅಂದ್ರೆ ಜುಲೈ 22ನೇ ತಾರೀಕಿನಂದು ಮಹಿಳೆಯೊಬ್ಬರು ಗ್ಯಾಸ್ಟ್ರಿಕ್ ಮತ್ತು ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಆಕೆಯ ಮಗ ನಾಲ್ಕೈದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಯಾವುದೇ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿಲ್ಲ ಹೀಗಾಗಿ ಆಸ್ಪತ್ರೆಯಲ್ಲಿ ಬೆಡ್ ಬೇಕು ಅಂದರೆ 20 ಸಾವಿರ ರುಪಾಯಿ ಹಣ ಕೊಡಬೇಕು ಅಂತ ಬ್ರೋಕರ್​ರೊಬ್ಬ ಹಣವನ್ನು ಪಡೆದುಕೊಂಡಿದ್ದಾನೆ. ಕೊನೆಗೆ ಕೋಣನಕುಂಟೆಯ ಕ್ಯೂರ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿದ್ದಾರೆ.

27 ನೇ ತಾರೀಖಿನಂದು ಖಾಸಗಿ ಲ್ಯಾಬ್ ನಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದೇವೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಆದರೆ ಲ್ಯಾಬ್ ಎಲ್ಲಿದೆ ಎಂದು ಮಹಿಳೆಯ ಮಗ ಹುಡುಕಿಕೊಂಡು ಹೋಗಿದ್ದಾರೆ. ಅಲ್ಲಿ ಆ ಹೆಸರಿನ ಯಾವುದೇ ಲ್ಯಾಬ್ ಇರದಿದ್ದನ್ನು ಕಂಡ ಮಗ ಬಿಬಿಎಂಪಿ ಆಫೀಸಿಗೆ ಹೋಗಿ ಇದರ ಬಗ್ಗೆ ವಿಚಾರಣೆ ಮಾಡಿದ್ದಾರೆ. ಆದರೆ ಬಿಬಿಎಂಪಿ ಸಿಬ್ಬಂದಿಗಳು ನಿಮ್ಮ ತಾಯಿ ಯಾವುದೇ ರಿಪೋರ್ಟ್ ಬಂದಿಲ್ಲವೆಂದು ವಾಪಸ್ ಕಳಿಸಿದ್ದಾರೆ.

ಈಗ 29 ನೇ ತಾರೀಖಿನಂದು ಬೊಮ್ಮನಹಳ್ಳಿಯ ಬಿಬಿಎಂಪಿ ಆಫೀಸಿಗೆ ಹೋಗಿ ರಿಪೋರ್ಟ್ ಚೆಕ್ ಮಾಡಿಸಿದಾಗ ಮಹಿಳೆಗೆ ಕೊರೊನಾ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ಆದರೆ ಇಂದು ಬೆಳಿಗ್ಗೆ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ಉಳಿದ ಬಿಲ್ ಪಾವತಿ ಮಾಡದಿದ್ದರೆ ಮಹಿಳೆಯ ಶವವನ್ನು ಕೊಡುವುದಿಲ್ಲವೆಂದಿದ್ದಾರೆ.

ಈಗಾಗಲೇ 3 ಲಕ್ಷ ಹಣವನ್ನು ಪಾವತಿಸಿರುವ ಮಹಿಳೆಯ ಮಗ, ಉಳಿದ ಹಣವನ್ನು ಕಟ್ಟಲಾಗದೆ ಆಸ್ಪತ್ರೆ ಮುಂದೆ ಕಣ್ಣೀರಿಟ್ಟ ದೃಶ್ಯ ಅಲ್ಲಿದ್ದವರ ಮನಕಲಕುವಂತಿತ್ತು.

Related Tags:

Related Posts :

Category:

error: Content is protected !!